ವಾಷಿಂಗ್ಟನ್: ನೂರು ಅಡಿ ಗಾತ್ರದ ಕ್ಷುದ್ರಗ್ರಹವೊಂದು ಭಾನುವಾರ ಭೂಮಿಯ ಬಳಿಯಿಂದ ಹಾದು ಹೋಗಲಿದೆ. ಭೂಮಿಯಿಂದ 15000 ಮೈಲು ಹತ್ತಿರಲ್ಲಿ ಇದು ಹಾದು ಹೋಗಲಿದ್ದು ಇದರಿಂದಾಗಿ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
2013ಟಿಎಕ್ಸ್ 68 (Asteroid 2013 TX68) ಎಂಬ ಹೆಸರಿರುವ ಕ್ಷುದ್ರಗ್ರಹವನ್ನು ಮೂರು ವರ್ಷ ಹಿಂದೆ ಅಮೆರಿಕದ ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. near-Earth objects ನಲ್ಲಿರುವ ಕ್ಷುದ್ರ ಗ್ರಹ ಇದಾಗಿರುವುದರಿಂದ ಅದು ಭೂಮಿಗೆ ಅಪಾಯ ಎಂದೇ ಹೇಳಲಾಗುತ್ತಿತ್ತು.
ಆದರೆ ಈ ಕ್ಷುದ್ರಗ್ರಹವು ಸುರಕ್ಷಿತವಾಗಿ ಭೂಮಿಯ ಸಮೀಪದಲ್ಲೇ ಹಾದುಹೋಗಲಿದೆ. ಇದು ಎಷ್ಟು ದೂರದಲ್ಲಿ ಹಾದು ಹೋಗಲಿದೆ ಎಂಬುದನ್ನೂ ನಾವು ನಿಖರವಾಗಿ ಹೇಳಬಲ್ಲೆವು. ಇದರಿಂದಾಗಿ ಭೂಮಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos