ಲಂಡನ್: ಫೇಸ್ ಬುಕ್ ಮೆಸೆಂಜರ್ ಕೆಎಲ್ ಎಂ ರಾಯಲ್ ಡಚ್ ಏರ್ ಲೈನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಿಮಾನ ಸಂಸ್ಥೆಯ ಪ್ರಯಾಣಿಕರಿಗೆ ಪ್ರಯಾಣದ ಕುರಿತ ಪ್ರತಿಯೊಂದು ಮಾಹಿತಿಯೂ ಮೆಸೆಂಜರ್ ಮೂಲಕ ಪಡೆಯಬಹುದಾಗಿದೆ.
ವಿಮಾನ ಟಿಕೆಟ್ ಬುಕ್ ಮಾಡಿಸಿದ ನಂತರ ಕೆಎಲ್ಎಂ ವೆಬ್ ಸೈಟ್ ನಿಂದ ಮೆಸೆಂಜರ್ ಮೂಲಕ ಮಾಹಿತಿ ಪಡೆಯುವುದನ್ನು ಆಯ್ಕೆ ಮಾಡಿಕೊಂಡರೆ, ಏರ್ ಲೈನ್ ಸಂಸ್ಥೆ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್, ಚೆಕ್-ಇನ್ ದೃಢೀಕರಣ ಮತ್ತು ಫ್ಲೈಟ್ ಕುರಿತಾದ ಪ್ರತಿಯೊಂದು ಮಾಹಿತಿಯನ್ನೂ ಮೆಸೆಂಜರ್ ಆಪ್ ಮೂಲಕವೇ ಒದಗಿಸಲಿದೆ.
ಮೆಸೆಂಜರ್ ಮೂಲಕವೇ ಪ್ರಯಾಣಿಕರು ಕೆಎಲ್ಎಂ ನ ಸಿಬ್ಬಂದಿಗಳೊಂದಿಗೆ ಮೆಸೆಂಜರ್ ಮೂಲಕವೇ ಸಂವಹನ ನಡೆಸಬಹುದಾಗಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕೆಎಲ್ಎಂ ಫೇಸ್ ಬುಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮೊದಲ ಏರ್ ಲೈನ್ ಸಂಸ್ಥೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಮಾನಯಾನ ಸಂಸ್ಥೆಗಳೊಂದಿಗೆ ಇದೇ ಮಾದರಿಯಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.