ನ್ಯೂಯಾರ್ಕ್: ಫೇಸ್ ಬುಕ್ ನಲ್ಲಿ ಟ್ಯಾಗಿಂಗ್ ವ್ಯವಸ್ಥೆ ಬಳಕೆದಾರರ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿರುವ ಪ್ರಕರಣವನ್ನು ವಜಾಗೊಳಿಸಲು ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಧೀಶರು ನಿರಾಕರಿಸಿದ್ದಾರೆ.
ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ನ ಟ್ಯಾಗಿಂಗ್ ವ್ಯವಸ್ಥೆ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಆರೋಪಿಸಿದ್ದ ಮೊಕದ್ದಮೆಯನ್ನು ವಜಾಗೊಳಿಸಬೇಕು ಎಂದು ಫೇಸ್ ಬುಕ್ ಫೆಡರಲ್ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿತ್ತು. ಫೇಸ್ ಬುಕ್ ನ ಬಯೋಮೆಟ್ರಿಕ್ ಸಾಫ್ಟ್ ವೇರ್, ಬಳಕೆದಾರರ ಅನುಮತಿ ಇಲ್ಲದೇ ಫೇಸ್ ಪ್ರಿಂಟ್ ನ್ನು ನಿರ್ಮಿಸುತ್ತಿದ್ದು ಇದು ಇಲಿನಾಯ್ಸ್ ಬಯೋಮೆಟ್ರಿಕ್ ಮಾಹಿತಿ ಗೌಪ್ಯತೆ ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ಟ್ಯಾಗ್ ಮಾಡಿದ ನಂತರ ಬಳಕೆದಾರರು ಹೊರಬರುವ ಹಾಗೂ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಆಯ್ಕೆ ನೀಡಲಾಗಿದೆಯಾದರೂ ಫೆಡರಲ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿದೆ. ಫೇಸ್ ಬುಕ್ ನ ಚಹರೆ ಗುರುತಿಸುವಿಕೆಯ ತಂತ್ರಜ್ಞಾನ ಬಳಕೆದಾರರ ಅನುಮತಿ ಇಲ್ಲದೇ ಆತನ ಫೇಸ್ ಪ್ರಿಂಟ್ ನ್ನು ಸ್ಕ್ಯಾನ್ ಮಾಡುತ್ತದೆ ಆದ್ದರಿಂದ ಇದು ಖಾಸಗಿತಾಣದ ಉಲ್ಲಂಘನೆ ಎಂಬ ಆರೋಪವನ್ನು ಫೆಡರಲ್ ಕೋರ್ಟ್ ಪುರಸ್ಕರಿಸಿ ಪ್ರಕರಣದ ವಿಚಾರಣೆ ನಡೆಸಲು ನಿರಾಕರಿಸಿದೆ.