ವಿಜ್ಞಾನ-ತಂತ್ರಜ್ಞಾನ

30 ವರ್ಷಗಳ ಸತತ ಸೇವೆ ನಂತರ ವಾಯುಪಡೆಯಿಂದ ಸೀ ಹ್ಯಾರಿಯರ್ಸ್ ಯುದ್ಧ ವಿಮಾನಗಳಿಗೆ ನಿವೃತ್ತಿ!

Srinivas Rao BV

ಪಣಜಿ: ಸತತ 30 ವರ್ಷಗಳಿಂದ ಭಾರತೀಯ ವಾಯುಪಡೆಯಲ್ಲಿ ಬಳಸಿಕೊಳ್ಳಲಾಗಿದ್ದ ಸೀ ಹ್ಯಾರಿಯರ್ಸ್ ಯುದ್ಧ ವಿಮಾನಗಳು ಮೇ.11 ರಂದು ನಿವೃತ್ತಿ ಪಡೆದಿವೆ. ವಾಯುಪಡೆಯಲ್ಲಿ ಸೀ ಹ್ಯಾರಿಯರ್ಸ್ ವಿಮಾನದ ಬದಲು ರಷ್ಯಾದ ಮಿಗ್ 29 ಕೆ ಜೆಟ್ ಗಳನ್ನು ಬಳಾಸಿಕೊಳ್ಳಲಾಗುತ್ತಿದ್ದು, ಸೀ ಹ್ಯಾರಿಯರ್ಸ್ ಯುದ್ಧ ವಿಮಾನಗಳ ಬಳಕೆಯನ್ನು ಇಂದಿನಿಂದ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ.
ಗೋವಾದ ವಾಯು ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಷ್ಯಾda ಮಿಗ್ 29 ಕೆ ಜೆಟ್ ಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದೆ. ಫಾಕ್ಲೆಂಡ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೀ ಹ್ಯಾರಿಯರ್ಸ್ ಯುದ್ಧ ವಿಮಾನಗಳನ್ನು 1960 ರಲ್ಲಿ ಬ್ರಿಟಿಷರು ಅಭಿವೃದ್ಧಿಪಡಿಸಿದ್ದರು. ಫಾಕ್ಲೆಂಡ್ ಯುದ್ಧದಲ್ಲಿ ಮಾತ್ರವಲ್ಲದೇ, ಗಲ್ಫ್ ಯುದ್ಧ ಹಾಗೂ ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿ ನ್ಯಾಟೋ ಮದ್ಯಪ್ರವೇಶದ ಸಂದರ್ಭದಲ್ಲೂ ಬಳಕೆಯಾಗಿತ್ತು. ನಿವೃತ್ತಿ ಪಡೆದಿರುವ ಯುದ್ಧ ವಿಮಾನಗಳನ್ನು ವಸ್ತು ಸಂಗ್ರಹಾಲಯಗಳಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.

SCROLL FOR NEXT