ವಿಜ್ಞಾನ-ತಂತ್ರಜ್ಞಾನ

ವಿಡಿಯೋಗಳನ್ನು ಶೇರ್ ಮಾಡಲು ಯೂಟ್ಯೂಬ್ ನಿಂದ ಮೆಸೇಜಿಂಗ್ ಆಪ್ ಅಭಿವೃದ್ಧಿ

Srinivas Rao BV

ಸ್ಯಾನ್ ಫ್ರಾನ್ಸಿಸ್ಕೋ: ವಿಡಿಯೋಗಳನ್ನು ಶೇರ್ ( ಹಂಚಿಕೆ) ಮಾಡಲು ಯುಟ್ಯೂಬ್ ಮೊಬೈಲ್ ಆಪ್ ನ್ನು ತಯಾರಿಸುತ್ತಿದೆ. ಪ್ರಸ್ತುತ ಯೂಟ್ಯೂಬ್ ವಿಡಿಯೋಗಳನ್ನು ಮೊಬೈಲ್ ಮೂಲಕ  ಹಂಚಿಕೆ ಮಾಡಬೇಕೆಂದರೆ ಅದರ ಲಿಂಕ್ ನ್ನು ಪಡೆದು ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತಿದೆ. ಇದರ ಬದಲು ನೇರವಾಗಿ ವಿಡಿಯೋಗಳನ್ನು ಮೊಬೈಲ್ ಮೂಲಕ  ಹಂಚಿಕೆ ಮಾಡುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಯೂಟ್ಯೂಬ್ ಆಪ್ ನ್ನು ಅಭಿವೃದ್ಧಿ ಪಡಿಸುತ್ತಿದೆ.

ಪರೀಕ್ಷಾರ್ಥವಾಗಿ ಆಪ್ ನ್ನು ಬಳಕೆ ಮಾಡಲಾಗುತ್ತಿದ್ದು ಆಂಡ್ರಾಯ್ಡ್, ಐ ಫೋನ್ ಬಳಕೆದಾರರ ಸಣ್ಣ ಗುಂಪಿಗೆ ಆಪ್ ಬಳಕೆ ಮಾಡುವ ಸೌಲಭ್ಯ ಒದಗಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಯೂಟ್ಯೂಬ್ ಆಪ್ ನಲ್ಲೇ ಮೆಸೇಜಿಂಗ್ ಆಯ್ಕೆಯನ್ನು ಒದಗಿಸಿ ವಿಡಿಯೋಗಳನ್ನು ಹಂಚಿಕೆ ಮಾಡುವ ಸೌಲಭ್ಯವನ್ನು ಎಲ್ಲರಿಗೂ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ವಿಡಿಯೋ ಆಪ್ ನಲ್ಲೇ ಮೆಸೆಜಿಂಗ್ ಆಯ್ಕೆ ನೀಡಿದರೆ ಅದು ಗ್ರಾಹಕರನ್ನು ಸೆಳೆಯುತ್ತದೆ ಎಂದು ನಿರೀಕ್ಷಿಸಿರುವ ಯೂಟ್ಯೂಬ್ ಈ ಸೌಲಭ್ಯ ಒದಗಿಸಿದರೆ ಯೂಟ್ಯೂಬ್ ವಿಡಿಯೋಗಳನ್ನು ಬೇರೆ ಸಾಮಾಜಿಕ ಜಾಲತಾಣಗಳ ಆಪ್ ಗಳಿಂದ ಯೂಟ್ಯೂಬ್ ವಿಡಿಯೋಗಳು ಹಂಚಿಕೆಯಾಗುವುದರ ಬದಲು ತನ್ನದೇ ಆಪ್ ನಿಂದ ಹಂಚಿಕೆಯಾಗಲಿದೆ ಎಂದು ಯೂಟೂಬ್ ಚಿಂತನೆ ನಡೆಸಿದೆ.

SCROLL FOR NEXT