Namotel Acche Din smartphone
ಬೆಂಗಳೂರು: ಬೆಂಗಳೂರು ಮೂಲದ ನಮೋ ಟೆಲ್ ಕಂಪನಿ ಅಗ್ಗದ ಸ್ಮಾರ್ಟ್‌ಫೋನ್‌ವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಚ್ಛೇದಿನ್ ಎಂದು ಹೆಸರಿರುವ ಈ ಫೋನ್‌ನ ಬೆಲೆ ಕೇವಲ ರು.99 ಮಾತ್ರ!
ಪ್ರಸ್ತುತ ಫೋನ್ ಖರೀದಿಸುವುದಕ್ಕಾಗಿ ಮುಂಗಡ ಬುಕಿಂಗ್ ಮಾಡಬೇಕು. ನಮೋಟೆಲ್ ಡಾಟ್ ಕಾಂ (namotel.com) ವೆಬ್‌ಸೈಟ್‌ಗೆ ಹೋಗಿ ಮುಂಗಡ ಬುಕಿಂಗ್ ಮಾಡಬಹುದಾಗಿದೆ ಎಂದು ಕಂಪನಿಯ ಪ್ರೊಮೋಟರ್ ಮಾಧವ್ ರೆಡ್ಡಿ ಹೇಳಿದ್ದಾರೆ. ಮೇ 17 ರಿಂದ ಮೇ 25ರ ವರೆಗೆ ಬುಕಿಂಗ್ ಮಾಡಬಹುದಾಗಿದೆ.
ಈ ಫೋನ್ ಖರೀದಿಸಲು ಬಯಸುತ್ತಿರುವ ಗ್ರಾಹಕರು bemybanker.com ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿ ಅಲ್ಲಿಂದ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನ್ನು ಪಡೆಯಬೇಕು. ಈ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಬಳಸಿ ನಮೋಟೆಲ್ ಡಾಟ್‌ಕಾಂಗೆ ಲಾಗಿನ್ ಆಗಬಹುದಾಗಿದೆ. ಅಂದ ಹಾಗೆ ಬಿಮೈ ಬ್ಯಾಂಕರ್ ಡಾಟ್ ಕಾಂನಲ್ಲಿ ನೋಂದಣಿಯಾಗಬೇಕಿದ್ದರೆ, ಬಳಕೆದಾರರು ರು. 199 ಪಾವತಿ ಮಾಡಿ ಆಜೀವ ಸದಸ್ಯತ್ವ ಪಡೆಯಬೇಕಾಗಿದೆ.
480 X 800 ಪಿಕ್ಸೆಲ್ ಡಬ್ಲ್ಯುಜಿಎ ರೆಸಲ್ಯೂಷನ್
ಆಂಡ್ರಾಯಿಡ್ 5.1 ಲಾಲಿಪಾಪ್ ಓಎಸ್
4 ಜಿಬಿ ಇಂಟರ್‌ನಲ್ ಸ್ಟೋರೇಜ್ ( 32 ಜಿಬಿ ಎಕ್ಸ್‌ಪಾಂಡೇಬಲ್ ವಯಾ ಮೈಕ್ರೋ ಎಸ್ ಡಿ ಕಾರ್ಡ್ )
2 ಮೆಗಾ ಪಿಕ್ಸೆಲ್ ಕ್ಯಾಮೆರಾ ( ಬ್ಯಾಕ್ ಮತ್ತು ವಿಜಿಎ ಸೆಲ್ಫೀ ಕ್ಯಾಮೆರಾ)
ರು. 2999 ಬೆಲೆಯ ಫೋನ್‌ನನ್ನು ರು. 99 ನೀಡುತ್ತಿದ್ದೇವೆ ಎಂದು ಹೇಳುವ ನಮೋಟೆಲ್, ಕ್ಯಾಶ್ ಆನ್ ಡೆಲಿವರಿ ಮೂಲಕ ಫೋನ್‌ನ್ನು ಒದಗಿಸುತ್ತೇವೆ ಎಂದು ಜಾಹೀರಾತಿನಲ್ಲಿ ಹೇಳಿದೆ.
ಏತನ್ಮಧ್ಯೆ, ಮೇಲೆ ಉಲ್ಲೇಖಿಸಿರುವ ಎರಡೂ ವೆಬ್ ಸೈಟ್ ಗಳು ಸದ್ಯ ತಟಸ್ಥವಾಗಿವೆ.