ವಿಜ್ಞಾನ-ತಂತ್ರಜ್ಞಾನ

ಬಿಯರ್ ಫ್ರೆಶ್ ಆಗಿದೆಯೇ ಎಂದು ತಿಳಿಯಲು ಮೊಬೈಲ್ ಆ್ಯಪ್

Rashmi Kasaragodu
ನೀವು ಸೇವಿಸುತ್ತಿರುವ ತಣ್ಣಗಿನ ಬಿಯರ್ ಫ್ರೆಶ್ ಆಗಿದೆಯೇ? ಎಂದು ತಿಳಿಯುವುದು ಹೇಗೆಂದು ಯೋಚಿಸುತ್ತಿದ್ದರೆ ಅದಕ್ಕೆ ಸ್ಮಾರ್ಟ್ ಉತ್ತರ ಇಲ್ಲಿದೆ.  ಬಿಯರ್‌ನ ತಾಜಾತನ ಪರೀಕ್ಷಿಸಲು ಸ್ಮಾರ್ಟ್‌ಫೋನ್ ಆ್ಯಪ್‌ವೊಂದನ್ನು ಮ್ಯಾಡ್ರಿಡ್‌ನ ಕಂಪ್ಯೂಲ್ಟೆನ್ಸ್ ವಿಶ್ವವಿದ್ಯಾನಿಲಯದ ತಜ್ಞರು ಸಿದ್ಧಪಡಿಸಿದ್ದಾರೆ.
ಪೋಲಿಮಾರ್ ಸೆನ್ಸರ್ ನಿಂದ ಬಿಯರ್‌ನ ತಾಜಾತನದ ಮಟ್ಟವನ್ನು ಅಳೆಯಲಾಗುತ್ತಿದ್ದು, ಈ ಸೆನ್ಸರ್  ಕಲರ್ ಬದಲಿಸುವ ಮೂಲಕ ಬಿಯರ್ ತಾಜಾ ಆಗಿದೆಯೇ? ಅಥವಾ ಹಳಸಿದ್ದೋ ಎಂಬುದನ್ನು ಹೇಳುತ್ತದೆ. ಈ ಸೆನ್ಸರ್‌ನ್ನು ಸ್ಮಾರ್ಟ್‌ಫೋನ್ ಆ್ಯಪ್ ನಿಯಂತ್ರಿಸುತ್ತದೆ .
ಬಿಯರ್‌ನ ಟೈಪ್ ಮತ್ತು ಸ್ಟೋರೇಜ್ ಕಂಡೀಷನ್‌ಗೆ ಅನುಗುಣವಾಗಿ ಅದರ ರುಚಿ ಕೂಡಾ  ಬದಲಾಗುತ್ತದೆ. ಹೀಗೆ ಬಿಯರ್‌ನ ಗುಣಮಟ್ಟವನ್ನು ಪತ್ತೆ ಹಚ್ಚುವುದಕ್ಕಾಗಿ ತಜ್ಞರು ಕ್ರೊಮೆಟೋಗ್ರಫಿ ತಂತ್ರಜ್ಞಾನವನ್ನು ಬಳಸಿ ಸೆನ್ಸರ್ ಡಿಸ್ಕ್ ತಯಾರಿಸಿದ್ದಾರೆ. ಇಲ್ಲಿ ಬಿಯರ್ ಗುಣಮಟ್ಟಕ್ಕೆ ಅನುಸಾರವಾಗಿ ಹಳದಿ ಬಣ್ಣದಿಂದ ಪಿಂಕ್ ಬಣ್ಣಕ್ಕೆ ತಿರುಗುತ್ತದೆ.  ಈ ಬಣ್ಣಗಳು ಮೂಲಕ ಬಿಯರ್‌ನ ಗುಣಮಟ್ಟವನ್ನು ಅಳೆಯಬಹುದು. 
ಈ ಸೆನ್ಸರ್ ಡಿಸ್ಕ್‌ನ ಫೋಟೋವನ್ನು ನೋಡಿದ ಕೂಡಲೇ ಬಿಯರ್ ಹಳಸಿದೆಯೇ? ಅಥವಾ ತಾಜಾ ಇದೆಯೇ ಎಂಬುದನ್ನು ಆ್ಯಂಡ್ರಾಯಿಡ್ ಆ್ಯಪ್ ಪತ್ತೆ ಹಚ್ಚುತ್ತದೆ. ಈ ಆ್ಯಪ್ ಈಗ ಓಪನ್ ಸೋರ್ಸ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಆ್ಯಪಲ್ ಐಒಎಸ್ ಡಿವೈಸ್ ನಲ್ಲಿ ಲಭ್ಯವಾಗಲಿದೆ.
SCROLL FOR NEXT