ಸಿಯೋಲ್: ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ ತನ್ನ ಗ್ಯಾಲಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗತಗೊಳಿಸಲು ನಿರ್ಧರಿಸಿದೆ ಎಂಬ ವರದಿಗಳು ಪ್ರಕಟವಾಗಿದೆ.
ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ದೋಷದಿಂದ ಸ್ಫೋಟಗೊಂಡ ಪ್ರಕರಣಗಳು ಹೆಚ್ಚುತ್ತಿದ್ದು, ಸ್ಫೋಟಗೊಂಡ ಮೊಬೈಲ್ ಗಳ ಬದಲಿಗೆ ಗ್ರಾಹಕರಿಗೆ ನೀಡಲಾಗಿದ್ದ ಹೊಸ ಮೊಬೈಲ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸಂಸ್ಥೆ ಗ್ಯಾಲಕ್ಸಿ ನೋಟ್ 7 ಸರಣಿಯ ಮೊಬೈಲ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.
ಗ್ರಾಹಕರ ಭದ್ರತೆ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ದಕ್ಷಿಣ ಕೊರಿಯಾದಲ್ಲಿ ಆಗಸ್ಟ್ 19 ರಿಂದ ನೋಟ್ 7 ಸರಣಿಯ ಮೊಬೈಲ್ ಗಳ ಮಾರಾಟವನ್ನು ಪ್ರಾರಂಭಿಸಲಾಗಿತ್ತು. ಈಗ ತಾಂತ್ರಿಕ ದೋಷ ಕಂಡುಬಂದಿರ್ಯ್ವ ಹಿನ್ನೆಲೆಯಲ್ಲಿ 2.5 ಮಿಲಿಯನ್ ಯುನಿಟ್ ಗಳನ್ನು ವಾಪಸ್ ಪಡೆದು, ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಸ್ಫೋಟಗೊಂಡ ಮೊಬೈಲ್ ಗಳ ಬದಲಾಗಿ ಗ್ರಾಹಕರಿಗೆ ನೀಡಲಾಗಿದ್ದ ಮೊಬೈಲ್ ಗಳು ಸಹ ಯುಎಸ್ ವಿಮಾನದಲ್ಲಿ ಸ್ಫೋಟಗೊಂಡ ಬಗ್ಗೆ ವರದಿಯಾಗಿತ್ತು.