ವಿಜ್ಞಾನ-ತಂತ್ರಜ್ಞಾನ

"ಪ್ಲಾನೆಟ್ 9" ರಹಸ್ಯ ಗ್ರಹದಿಂದ ಸೌರಮಂಡಲ ವ್ಯವಸ್ಥೆಯೇ ಬದಲು!

Srinivasamurthy VN

ವಾಷಿಂಗ್ಟನ್: ಇತ್ತೀಚೆಗೆ ಪತ್ತೆಯಾಗಿರುವ ರಹಸ್ಯ ಪ್ಲಾನೆಟ್ 9 ಗ್ರಹದಿಂದ ನಮ್ಮ ಸೌರ ಮಂಡಲದ ವ್ಯವಸ್ಥೆಯೇ ಬದಲಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಭೂಮಿಗಿಂತ ಸುಮಾರು 10 ಪಟ್ಟು ದೊಡ್ಡದಾದ ಈ ನೂತನ ಗ್ರಹವೊಂದು ಸೌರಮಂಡಲದಲ್ಲಿ ಪತ್ತೆಯಾಗಿದ್ದು, ಇದರಿಂದ ನಮ್ಮ ಸೌರಮಂಡಲದ ವ್ಯವಸ್ಥೆಯೇ ಬದಲಾಗುತ್ತದೆ ಎಂದು  ವಿಜ್ಞಾನಿಗಳ ತಂಡವೊಂದು ಶಂಕೆ ವ್ಯಕ್ತಪಡಿಸಿದೆ. ನೆಪ್ಚೂನ್ ಗ್ರಹಕ್ಕಿಂತಲೂ ದೂರದಲ್ಲಿ ಈ ಪ್ಲಾನೆಟ್ 9 ಗ್ರಹ ಪತ್ತೆಯಾಗಿದ್ದು, ಈ ಗ್ರಹದ ಕಕ್ಷೆ ಬಾಗಿದಂತಿದ್ದು, ಕಕ್ಷೆಯಲ್ಲಿ ಈ ರಹಸ್ಯ ಗ್ರಹ  ತಿರುಗುವಾಗ ಸೌರಮಂಡಲದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಹಿಂದೆ ಪ್ಲಾನೆಟ್ 9 ಗ್ರಹದ ಅಸ್ತಿತ್ವವನ್ನು ಪತ್ತೆ ಮಾಡಿದ್ದ ಅದೇ ಕ್ಯಾಲಿಫೋರ್ನಿಯಾದ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಕಾನ್‌ಸ್ಟಾಂಟಿನ್‌ ಬಾಟಿಗಿನ್‌ ಹಾಗೂ ಮೈಕ್‌ ಬ್ರೌನ್‌   ತಂಡ ಈ ಬಗ್ಗೆ ತಮ್ಮ ಅಧ್ಯಯನ ಮುಂದುವರೆಸಿದ್ದು, ಈ ರಹಸ್ಯ ಗ್ರಹ ಗ್ರಹಿಕೆಗೂ ನಿಲುಕದ ವರ್ತುಲವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತನ್ನ ಕಕ್ಷೆಯಲ್ಲಿ ಸುತ್ತುವಾಗ ಈ ಗ್ರಹ  ಅತ್ತಿಂದಿತ್ತ ಬಾಗುವುದರಿಂದ ಸೌರಮಂಡಲದ ಇತರೆ ಗ್ರಹಗಳ ಕಕ್ಷೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸೌರಮಂಡಲದ ವ್ಯವಸ್ಥೆಯೇ ಬದಲಾಗುತ್ತದೆ ಎಂದು ವಿಜ್ಞಾನಿಗಳ ಹೇಳಿದ್ದಾರೆ.

"ಪ್ಲಾನೆಟ್ 9 ಗ್ರಹ ಗಾತ್ರದಲ್ಲಿ ಬೃಹದಾಕಾರವಾಗಿದ್ದು, ಈ ಗ್ರಹದ ಒಡಲ್ಲಲ್ಲಿರುವ ರಾಸಾಯನಿಕ ವಸ್ತುಗಳು ಕಕ್ಷೆಯಲ್ಲಿ ಚಲಿಸುತ್ತಿರುವಾಗ ಸೌರಮಂಡಲದ ಇತರೆ ವಸ್ತುಗಳನ್ನು ಆಕರ್ಷಿಸುತ್ತವೆ.  ಹೀಗಾದಾಗ ಸೌರಮಂಡಲದ ವ್ಯವಸ್ಥೆಯೇ ಮುಂದೊಂದು ದಿನ ಬದಲಾಗುವು ಸಾಧ್ಯತೆ ಇದೆ ಎಂದು ವಿಜ್ಞಾನಿಗಳ ತಂಡ ಮತ್ತೋರ್ವ ಸದಸ್ಯ ಬೈಲೆ ಅಭಿಪ್ರಾಯಪಟ್ಟಿದ್ದಾರೆ.

ನೂತನ ರಹಸ್ಯ ಗ್ರಹದಿಂದ ಸೌರಮಂಡಲದ ಮೇಲೆ ದಿಢೀರ್ ಪರಿಣಾಮವಾಗದೇ ಇದ್ದರೂ ದೀರ್ಘಕಾಲಿಕ ಸಮಯದಲ್ಲಿ ಸೌರಮಂಡಲದ ವ್ಯವಸ್ಥೆಯೇ ಬದಲಾಗುವ ಅಪಾಯವಿದೆ ಎಂದು  ಅವರು ಹೇಳಿದ್ದಾರೆ.

ಈ ಹಿಂದೆ ಇದೇ ವಿಜ್ಞಾನಿಗಳ ತಂಡ ಪ್ರಾನೆಟ್ 9 ರಹಸ್ಯ ಗ್ರಹವನ್ನು ಪತ್ತೆ ಮಾಡಿತ್ತು. ಸೌರಮಂಡಲದಲ್ಲಿ ಪ್ರಸ್ತುತ ಅತ್ಯಂತ ದೂರದಲ್ಲಿರುವ ಗ್ರಹ ಎಂದರೆ ನೆಪ್ಚೂನ್. ಆದರೆ ಇದಕ್ಕಿಂತಲೂ  ದೂರವಿರುವ ಮತ್ತು ಆಕಾರದಲ್ಲಿ ಭೂಮಿಗಿಂತ 10ಪಟ್ಟು ದೊಡ್ಡದಾದ ರಹಸ್ಯ ಮತ್ತು  ವಿಚಿತ್ರ ಗ್ರಹ ಪ್ಲಾನೆಟ್ 9 ಅನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ನೆಫ್ಚೂನ್‌, ಸೂರ್ಯನ ನಡುವೆ ಇರುವ  ಅಂತರಕ್ಕಿಂತ ಸರಾಸರಿ 20 ಪಟ್ಟು ದೂರದಲ್ಲಿ ಈ ಹೊಸ ಗ್ರಹ ಪತ್ತೆಯಾಗಿತ್ತು.

SCROLL FOR NEXT