ವಿಜ್ಞಾನ-ತಂತ್ರಜ್ಞಾನ

ನಕ್ಷತ್ರಗಳನ್ನೇ ನುಂಗುತ್ತಿರುವ "ಕಪ್ಪುರಂದ್ರ"; ಅಚ್ಚರಿಗೆ ಕಾರಣವಾಯ್ತು ವಿಜ್ಞಾನಿಗಳ ನೂತನ ಸಂಶೋಧನೆ

Srinivasamurthy VN

ನ್ಯೂಯಾರ್ಕ್: ಅಮೆರಿಕದ ಖ್ಯಾತ ಖಗೋಳ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ರವರ ಕಪ್ಪುರಂದ್ರ ಸಿದ್ಧಾಂತದ ಬಗ್ಗೆ ಆಕ್ಷೇಪ ಎತ್ತಿದ್ದ ಖ್ಯಾತನಾಮರಿಗೆ ಉತ್ತರ ನೀಡಬಲ್ಲ ಘಟನೆಯೊಂದು ಆಗಸದಲ್ಲಿ  ನಡೆದಿದ್ದು, ತನ್ನ ಸಮೀಪದಲ್ಲಿ ಸುಳಿದಾಡಿದ್ದ ನಕ್ಷತ್ರವೊಂದನ್ನು ಕಪ್ಪುರಂದ್ರ ನುಂಗಿಹಾಕಿದೆ ಎಂದು ವಿಜ್ಞಾನಿಗಳ ಸಂಶೋಧನೆಯೊಂದು ಹೇಳಿದೆ.

ಸ್ವತಃ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಕ್ಷತ್ರವನ್ನು ಕಪ್ಪು ರಂದ್ರ ನುಂಗಿಹಾಕಿರುವ ಸುದ್ದಿಯನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ವರದಿಯಲ್ಲಿ ಪ್ರಮುಖ ಉಲ್ಲೇಖಗಳನ್ನು ಕೂಡ  ಪ್ರಕಟಿಸಿದೆ. ಇಡೀ ವಿಶ್ವದಲ್ಲೇ ಅತ್ಯಂತ ಪ್ರಬಲ ಗುರುತ್ವಾಕರ್ಷಣೆ ಶಕ್ತಿ ಹೊಂದಿರುವ ಕಪ್ಪುರಂದ್ರ ನಕ್ಷತ್ರವನ್ನು ನುಂಗಿಹಾಕುವ ವೇಳೆ ನಕ್ಷತ್ರ ಸ್ಫೋಟಗೊಂಡಿದ್ದು, ಇದರಿಂದ ಅಪಾರ ಪ್ರಮಾಣದ  ಶಕ್ತಿ ಹೊರಹೊಮ್ಮಿದೆ ಎಂದು ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದಾರೆ.

ತಮ್ಮ ಕಕ್ಷೆಯಲ್ಲಿ ತಿರುಗುವ ನಕ್ಷತ್ರ ಕಪ್ಪುರಂದ್ರ ಕಕ್ಷೆಯ ಸಮೀಪ ಆಗಮಿಸುತ್ತಿದ್ದಂತೆಯೇ ಕಪ್ಪುರಂದ್ರ ನಕ್ಷತ್ರವನ್ನು ತನ್ನ ಸೆಳೆದುಕೊಂಡಿದ್ದು, ಕಪ್ಪುರಂದ್ರ ಅಪಾರ ಪ್ರಮಾಣದ ಗುರುತ್ವಾಕರ್ಷಣೆ  ಒತ್ತಡದಿಂದಾಗಿ ನಕ್ಷತ್ರ ಸ್ಫೋಟಗೊಂಡಿರಬಹುದು. ಸ್ಫೋಟದಿಂದಾಗಿ ಅಪಾರ ಪ್ರಮಾಣದ ಶಕ್ತಿ ಮತ್ತು ಬೆಂಕಿ ಬಾಹ್ಯಾಕಾಶದಲ್ಲಿ ಹರಡಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕಪ್ಪುರಂದ್ರ  ನಕ್ಷತ್ರವನ್ನು ನುಂಗುವ ಈ ಪ್ರಕ್ರಿಯೆಗೆ ವಿಜ್ಞಾನಿಗಳು ಸ್ಟಲ್ಲರ್ ಟೈಡಲ್ ಡಿಸ್ರಪ್ಷನ್ (ನಕ್ಷತ್ರ ಉಬ್ಬರವಿಳಿತದ ಅಡ್ಡಿ) (stellar tidal disruption) ಎಂದು ಕರೆದಿದ್ದು, ಈ ಪ್ರಕ್ರಿಯೆಯಿಂದ  ಅಪಾರ ಪ್ರಮಾಣದ ಶಕ್ತಿಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ.

ವಿಜ್ಞಾನಿಗಳ ಈ ಸಂಶೋಧನೆ ಮೂಲಕ ಕಪ್ಪುರಂದ್ರ ನಿಗೂಢ ರಹಸ್ಯಗಳು ಬಯಲಾಗಿದ್ದು, ಕಪ್ಪುರಂದ್ರ ಗುರುತ್ವಾಕರ್ಷಣ ಶಕ್ತಿಯ ಗ್ರಹಿಕೆ ವಿಜ್ಞಾನಿಗಳಿಗೆ ಆಗಿದೆಯಂತೆ. ಅಲ್ಲದೆ ಕಪ್ಪುರಂದ್ರದ  ಕಕ್ಷೆಯ ಕುರಿತಾದ ಒಂದಷ್ಟು ಮಾಹಿತಿಗಳೂ ಕೂಡ ತಿಳಿದಿದೆ ಎಂದು ವಿಜ್ಞಾನಿಗಳು ವರದಿಯಲ್ಲಿ ತಿಳಿಸಿದ್ದಾರೆ.

SCROLL FOR NEXT