ವಿಜ್ಞಾನ-ತಂತ್ರಜ್ಞಾನ

ಗುಜರಾತ್: ರಸ್ತೆ ಅಪಘಾತದಲ್ಲಿ ಪ್ರಾಣಿಗಳ ಸಾವು ಕಡಿಮೆ ಮಾಡಲು ಅಲರ್ಟ್ ವ್ಯವಸ್ಥೆ ಅಭಿವೃದ್ಧಿ

Srinivas Rao BV
ಅಹಮದಾಬಾದ್: ರಸ್ತೆಗೆ ಅಡ್ಡವಾಗಿ ಬಂದು ಅಪಘಾತಕ್ಕೀಡಾಗಿ ಸಾವನ್ನಪ್ಪುವ ಪ್ರಾಣಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಗುಜರಾತ್ ನ ತಜ್ಞರ ತಂಡ ಅಲರ್ಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. 
ಅಲರ್ಟ್ ವ್ಯವಸ್ಥೆ ರಿಯಲ್ ಟೈಮ್ ನಲ್ಲಿ ರಸ್ತೆಯ ಮೇಲಿರುವ ಪ್ರಾಣಿಗಳ ಬಗ್ಗೆ ಕಾರಿನ ಚಾಲಕರಿಗೆ ಮಾಹಿತಿ ನೀಡಲಿದ್ದು, ರಸ್ತೆ ಅಪಘಾತದಲ್ಲಿ ಗೋವುಗಳು ಸೇರಿದಂತೆ ಹಲವು ಪ್ರಾಣಿಗಳು ಜೀವಕಳೆದುಕೊಳ್ಳುವುದಕ್ಕೆ ಸ್ವಲ್ಪ ಮಟ್ಟಿಗೆ ತಗ್ಗಿಸುತ್ತದೆ ಎಂಬ ನಿರೀಕ್ಷೆ ಇದೆ. 
ಗುಜರಾತ್ ನ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ತಜ್ಞರು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಡಾಶ್ ಬೋರ್ಡ್ ನಲ್ಲಿ ಕ್ಯಾಮರಾ ಹಾಗೂ ಅಲ್ಗಾರಿದಮ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಮುಂದೆ ನಿಂತಿರುವ ಪ್ರಾಣಿಯ ಬಗ್ಗೆ ಮೊದಲೇ ಕಾರು ಚಾಲಕರಿಗೆ ಮಾಹಿತಿ ನೀಡುತ್ತದೆ. ಈ ಮೂಲಕ ರಸ್ತೆಗೆ ಅಡ್ಡವಾಗಿ ಬಂದು ಅಪಘಾತಕ್ಕೀಡಾಗಿ ಸಾವನ್ನಪ್ಪುವ ಪ್ರಾಣಿಗಳ ಸಂಖ್ಯೆಯನ್ನು ತಗ್ಗಿಸಲು ಸಾಧ್ಯವಿದೆ ಎನ್ನುತ್ತಾರೆ ತಜ್ಞರು ಹೇಳಿದ್ದಾರೆ. 
SCROLL FOR NEXT