ಸ್ಯಾನ್ ಫ್ರಾನ್ಸಿಸ್ಕೊ: ಸುಮಾರು ಒಂದು ಬಿಲಿಯನ್ ಗೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲಿದೆ.
ಕೇವಲ ಒಂದು ಟಚ್ ನಿಂದ ಬ್ಲಾಕ್ ಮಾಡಿದ್ದ ವ್ಯಕ್ತಿಯೊಂದಿಗೆ ಮತ್ತೆ ಚಾಟ್ ಆರಂಭಿಸಲು ಸಾಧ್ಯವಾಗುವ ಆಯ್ಕೆ ಹಾಗೂ ಗುಂಪಿನಲ್ಲಿದ್ದುಕೊಂಡೇ ಅಲ್ಲಿನ ಸಂದೇಶಗಳಿಗೆ ವ್ಯಕ್ತಿಗಳಿಗೆ ಖಾಸಗಿ ಸಂದೇಶ ರವಾನೆ ಮಾಡುವುದಕ್ಕೆ ಸಾಧ್ಯವಾಗುವ ಆಯ್ಕೆಗಳನ್ನು ಹೊಸ ಆವೃತ್ತಿಯಲ್ಲಿ ನೀಡಲಿದೆ.
ಗುಂಪಿನಲ್ಲಿದ್ದುಕೊಂಡೇ ಅಲ್ಲಿಯೇ ವ್ಯಕ್ತಿಗಳಿಗೆ ಖಾಸಗಿ ಸಂದೇಶ ಕಳಿಸಬಹುದಾಗಿರುವುದು ಕುತೂಹಲ ಮೂಡಿಸಿರುವ ಆಯ್ಕೆಯಾಗಿದೆ. ಇನ್ನು ವಾಟ್ಸ್ ಆಪ್ ಬಳಕೆ ಮಾಡುತ್ತಿರುವಾಗ ಕೇವಲ ಒಮ್ಮೆ ಫೋನ್ ನನ್ನು ಅಲುಗಾಡಿಸಿದರೆ ಚಾಟ್ ನಲ್ಲಿ ಸರಿಯಾಗಿರದ, ಅಥವಾ ಆಕ್ಷೇಪಾರ್ಹ ಅಂಶಗಳನ್ನು ರಿಪೋರ್ಟ್ ಮಾಡುವ ವ್ಯವಸ್ಥೆಯನ್ನೂ ಮುಂದಿನ ದಿನಗಳಲ್ಲಿ ಪರಿಚಯಿಸಲಾಗುತ್ತದೆ ಎಂದು ವಾಟ್ಸ್ ಆಪ್ ಹೇಳಿದೆ.