ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 1999 ರಿಂದ ಈ ವರೆಗೆ 209 ವಿದೇಶಿ ಉಪಗ್ರಹಗಳು ಹಾಗೂ 48 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿ ಸಂಸ್ಥೆಯ ಅತ್ಯಂತ ಹೆಚ್ಚು ಕಾರ್ಯಕ್ಷಮತೆ, ನಂಬಿಕಸ್ಥ ಉಪಗ್ರಹ ಉಡಾವಣಾ ವಾಹನ ಎಂಬ ಹೆಗ್ಗಳಿಗೆಕೆ ಪಾತ್ರವಾಗಿದೆ.
1999ರ ಮೇ ತಿಂಗಳಿನಿಂದ ಈ ವರೆಗೂ 28 ರಾಷ್ಟ್ರಗಳ ಒಟ್ಟು 209 ಉಪಗ್ರಹಗಳನ್ನು ಉಡಾವಣೆ ಮಾಡಿರುವುದಷ್ಟೇ ಅಲ್ಲದೇ, ಭಾರತದ 48 ಉಪಗ್ರಹಳನ್ನೂ ಉಡಾವಣೆ ಮಾಡಿದೆ. ಅಕ್ಟೋಬರ್ 1994 ರಲ್ಲಿ ಪಿಎಸ್ಎಲ್ ವಿ ಯ ಮೊದಲ ಕಾಪಿಬುಕ್ ಲಾಂಚ್ ನಂತರ ಪಿಎಸ್ಎಲ್ ವಿ ಅತ್ಯಂತ ಹೆಚ್ಚು ಕಾರ್ಯಕ್ಷಮತೆಯುಳ್ಳ ಉಪಗ್ರಹ ಉಡಾವಣಾ ವಾಹನ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದು, ಈ ವರ್ಷದ ಜೂನ್ ವರೆಗೂ ಸತತ 39 ಯಶಸ್ವಿ ಉಡಾವಣೆಗಳನ್ನು ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.
2015 ರ ಡಿಸೆಂಬರ್ 16 ರಂದು ಉಡಾವಣೆ ಮಾಡಿದ ಸಿಂಗಪೂರ್ ನ 400 ಕೆ.ಜಿ ತೂಕದ ಟೆಲಿಯೋಸ್ ಅರ್ತ್ ಅಬ್ಸರ್ವೇಷನ್ ಉಪಗ್ರಹ ಪಿಎಸ್ಎಲ್ ವಿ ಮೂಲಕ ಉಡಾವಣೆಯಾಗಿರುವ ಅತಿ ಹೆಚ್ಚು ತೂಕದ ಉಪಗ್ರಹವಾಗಿದ್ದು, ಈ ಪೈಕಿ 2007 ರ ಏಪ್ರಿಲ್ 23 ರಂದು ಉಡಾವಣೆಯಾದ ಇಟಲಿಯ ಅಗೈಲ್ ಉಪಗ್ರಹ (352ಕೆ.ಜಿ), 2008 ರ ಜನವರಿ 21 ರಂದು ಉಡಾವಣೇಯಾದ ಇಸ್ರೇಲ್ ನ ಟೆಕ್ಸಾರ್ (295 ಕೆ.ಜಿ) ಉಪಗ್ರಹಗಳು ಸೇರಿವೆ.
ಪಿಎಸ್ಎಲ್ ವಿ ಇಸ್ರೋ ಸಂಸ್ಥೆಗೆ ಆದಾಯವನ್ನೂ ತಂದುಕೊಟ್ಟಿದ್ದು ಲಾಭದಾಯಕ ಉಪಗ್ರಹ ಉಡಾವಣಾ ವಾಹನವಾಗಿದೆ. ಅಷ್ಟೇ ಅಲ್ಲದೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಯಶಸ್ವಿಯಾದ 2008 ರಲ್ಲಿ ಪ್ರಾರಂಭವಾದ ಚಂದ್ರಯಾನ-1, 2013 ರ ಮಾರ್ಸ್ ಮಿಷನ್ ನ ಉಪಗ್ರಹಳ ಉಡಾವಣೆಗಳಲ್ಲೂ ಸಹ ಪಿಎಸ್ಎಲ್ ಯನ್ನು ಬಳಕೆ ಮಾಡಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos