ಮುಂಬೈ: ಭಾರತದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಪೇಮೆಂಟ್ ಸಂಸ್ಥೆ ವಿಶ್ವದ ಅಗ್ರಗಣ್ಯ ಮೆಸೇಜಿಂಗ್ ಆಪ್ ಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದು ಮೆಸೇಜಿಂಗ್ ಆಪ್ ಸೇವೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದೆ.
ಸಾಫ್ಟ್ ಬ್ಯಾಂಕ್ ಹಾಗೂ ಆಲೀಬಾಬ ಸಂಸ್ಥೆಗಳು ನಡೆಸುತ್ತಿರುವ ಪೇಟಿಎಂ ಮೆಸೇಜಿಂಗ್ ಆಪ್ ಪರಿಚಯಿಸುವ ಮೂಲಕ ಭಾರತದ ಜನತೆಯನ್ನು ಆಕರ್ಷಿಸಲು ಸಿದ್ಧತೆ ನಡೆಸಿದ್ದುಮ್ ತಿಂಗಳಾಂತ್ಯಕ್ಕೆ ಹೊಸ ಮೆಸೇಜಿಂಗ್ ಆಪ್ ನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಪೇಟಿಎಂ ಈಗಾಗಲೇ ಭಾರತದಲ್ಲಿ 225 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಈ ವರ್ಷದ ಪ್ರಾರಂಭದಲ್ಲಿ ಹೈಕ್ ಮೆಸೇಜಿಂಗ್ ಆಪ್ ಡಿಜಿಟಲ್ ಪಾವತಿ ಸೇವೆಗಳನ್ನು ಒದಗಿಸುವ ಆಪ್ ನ್ನು ಬಿಡುಗಡೆ ಮಾಡಿತ್ತು. ಇದೇ ವೇಳೆ ಪೇಟಿಎಂ ಮೆಸೇಜಿಂಗ್ ಆಪ್ ಗೂ ಕಾಲಿಡಾಲು ಇಡಲು ಮುಂದಾಗುತ್ತಿದ್ದರೆ, ಅತ್ತ ವಾಟ್ಸ್ ಆಪ್ ಸಹ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಚಿಂತನೆ ನಡೆಸುತ್ತಿದೆ.