ಜಿಸ್ಯಾಟ್(ಫೋಟೋ ಕೃಪೆ-www.isro.gov.in) 
ವಿಜ್ಞಾನ-ತಂತ್ರಜ್ಞಾನ

ಫ್ರೆಂಚ್ ಗಯಾನಾದಿಂದ ಸಂವಹನ ಉಪಗ್ರಹ ಜಿಸ್ಯಾಟ್-17 ಯಶಸ್ವಿ ಉಡಾವಣೆ: ಇಸ್ರೊ

ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-17 ನ್ನು ಫ್ರೆಂಚ್ ನ ಗಯಾನಾದ ಕೌರೌನ ಬಾಹ್ಯಾಕಾಶ ನಿಲ್ದಾಣದಿಂದ ಭಾರವಾದ ರಾಕೆಟ್ ಏರಿಯಾನ್ಸ್ಪೇಸ್ ಮೂಲಕ ಇಂದು ಬೆಳಗ್ಗೆ ಯಶಸ್ವಿ....

ಬೆಂಗಳೂರು: ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-17 ನ್ನು ಫ್ರೆಂಚ್ ನ ಗಯಾನಾದ ಕೌರೌನ ಬಾಹ್ಯಾಕಾಶ ನಿಲ್ದಾಣದಿಂದ ಭಾರವಾದ ರಾಕೆಟ್ ಏರಿಯಾನ್ಸ್ಪೇಸ್ ಮೂಲಕ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾಯಿಸಲಾಯಿತು.
ವಿವಿಧ ಸಂವಹನ ಸೇವೆಗಳನ್ನು ಒದಗಿಸುವ ವಿಸ್ತರಿತ ಸಿ ಬ್ಯಾಂಡ್ ಮತ್ತು ಎಸ್ ಬ್ಯಾಂಡ್, ಸಹಜ ಸ್ಥಿತಿಯ ಸಿ ಬ್ಯಾಂಡ್ ಗಳಲ್ಲಿ ಪೇ ಲೋಡ್ ಗಳನ್ನು  ಹೊತ್ತ ಸುಮಾರು 3,477 ಕಿಲೋ ತೂಕದ  ಜಿಸ್ಯಾಟ್-17 ಉಪಗ್ರಹ ಬಾನೆತ್ತರಕ್ಕೆ ಚಿಮ್ಮಿತು.
ಹವಾಮಾನ ಮಾಹಿತಿ ರಿಲೇ ಮತ್ತು ಉಪಗ್ರಹ ಆಧಾರಿತ ಶೋಧ ಮತ್ತು ರಕ್ಷಣಾ ಸೇವೆಗಳಿಗೆ ಉಪಕರಣಗಳನ್ನು ಇದು ಹೊತ್ತೊಯ್ಯುತ್ತದೆ.
ಯುರೋಪ್ ನ ಉಡಾವಣಾ ವಾಹಕ ಏರಿಯಾನ್ಸ್ಪೇಸ್ ಫ್ಲೈಟ್ ವಿಎ238 ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯ ಫ್ರಾನ್ಸ್ ಪ್ರಾಂತ್ಯದ ಕೋರಿಯೊದಲ್ಲಿ ಏರಿಯೆನ್ ಲಾಂಚ್ ಸಂಕೀರ್ಣ ಸಂಖ್ಯೆ 3ರಿಂದ ಸಿಡಿದು ನಭಕ್ಕೆ ಚಿಮ್ಮಿತು. ಅಂತಾರಾಷ್ಟ್ರೀಯ ಕಾಲಮಾನ ಇಂದು ಮಧ್ಯರಾತ್ರಿ 2.29ಕ್ಕೆ ಆಕಾಶಕ್ಕೆ ಉಡಾವಣೆಯಾಗಬೇಕಿದ್ದ ಉಪಗ್ರಹ ಕೆಲ ನಿಮಿಷಗಳು ತಡವಾಗಿ ನೆಗೆಯಿತು.
ಜಿಸ್ಯಾಟ್ ಆಕಾಶಕ್ಕೆ ಚಿಮ್ಮಿ ಕಕ್ಷೆಗೆ ಸೇರಿದ ತಕ್ಷಣ ಸಹ ಪ್ರಯಾಣಿಕ ಉಪಗ್ರಹವಾದ ಹೆಲ್ಲಾಸ್ ಸ್ಯಾಟ್ 3-ಇಮ್ಮರ್ಸಾಟ್ ಎಸ್ ಇಎನ್ಎನ್ ಜೊತೆ ಸೇರಿಸಲಾಯಿತು  ಎಂದು ಇಸ್ರೊ ಪ್ರಕಟಿಸಿದೆ.
ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್(ಜಿಟಿಒ)ಗೆ ಉಡಾಯಿಸಿದ್ದ 17 ಟೆಲಿಕಮ್ಯುನಿಕೇಷನ್ ಸ್ಯಾಟಲೈಟ್ ಗಳ ಇಸ್ರೊದ ಕಾರ್ಯವೈಖರಿಯನ್ನು ಜಿಸ್ಯಾಟ್-17 ಬಲಗೊಳಿಸಲಿದೆ. ಈ ತಿಂಗಳು ಇಸ್ರೊ ಉಡಾಯಿಸಿದ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್ಎಲ್ ವಿ ಎಂಕೆ111 ಮತ್ತು  ಪಿಎಸ್ಎಲ್ ವಿ ಸಿ-38 ಉಪಗ್ರಹಗಳನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾಯಿಸಲಾಗಿತ್ತು. 

ಜಿಎಸ್ಎಲ್ ವಿ ಎಂಕೆ111 ಜಿಸ್ಯಾಟ್-19 ಉಪಗ್ರಹಗಳನ್ನು ಯಶಸ್ವಿಯಾಗಿ ಜೂನ್ 5 ರಂದು ಮತ್ತು ಪಿಎಸ್ಎಲ್ ವಿ-ಸಿ38 ಕಾರ್ಟೊಸ್ಯಾಟ್-2 ಸರಣಿ ಉಪಗ್ರಹವನ್ನು 30 ಸಹ ಪ್ರಯಾಣಿಕ ಉಪಗ್ರಹಗಳ ಜೊತೆಗೆ ಜೂನ್ 23ರಂದು ಉಡಾಯಿಸಲಾಗಿತ್ತು. ಭಾರವಾದ ಉಪಗ್ರಹಗಳನ್ನು ಹೊತ್ತೊಯ್ಯಲು ಏರಿಯಾನ್ -5 ರಾಕೆಟ್ ಗಳನ್ನು ಅವಲಂಬಿಸಿರುವ ಇಸ್ರೊ ಈ ಉದ್ದೇಶಕ್ಕಾಗಿ ಜಿಎಸ್ಎಲ್ ವಿ ಎಂಕೆ111 ನ್ನು ಅಭಿವೃದ್ಧಿಪಡಿಸಿದೆ.

ಉಪಗ್ರಹದ ಯಶಸ್ವಿ ಉಡಾವಣೆಯನ್ನು ದೃಢಪಡಿಸಿ ಟ್ವೀಟ್ ಮಾಡಿದ ಏರಿಯೆನ್ ಸ್ಪೇಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೆಫನ್ ಇಸ್ರೇಲ್, ಜಿಸ್ಯಾಟ್-17 ಯಶಸ್ವಿಯಾಗಿ ಏರಿಯೆನ್ 5 ಉಡಾವಣಾ ಉಪಗ್ರಹದಿಂದ ಬೇರ್ಪಟ್ಟಿದೆ ಎಂದು ಹೇಳಿದ್ದಾರೆ. ಪಠ್ಯ ಪುಸ್ತಕ ಮಿಷನ್ ಎಂದು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ.ಕೆ.ಶಿವನ್ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ಈಗಾಗಲೇ ಅವಧಿಯಾಗಿರುವ ಉಪಗ್ರಹಗಳ ಮುಂದುವರಿಕೆ ಸೇವೆಗೆ, ನಮ್ಮ ಟ್ರಾನ್ಸ್ಪಾಂಡರ್ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಮೊಬೈಲ್ ಉಪಗ್ರಹ ಸೇವೆಗಳಿಗೆ ಮತ್ತು ಅಂಟಾರ್ಟಿಕಾ ಪ್ರದೇಶಗಳಿಗೆ ನಮ್ಮ ಹಾರಿಜಾನ್ ವಿಸ್ತರಿಸಲು ಅಗತ್ಯವಾಗಿದೆ. 

ಜಿಸ್ಯಾಟ್-17ನ ಸಹ ಪ್ರಯಾಣಿಕ ಉಪಗ್ರಹ ಹೆಲ್ಲಸ್ ಸ್ಟಾಟ್ 3 ಇಮ್ಮರ್ಸತ್ ಎ ಇಯಾನ್ ಎರಡು ಪೆಲೊಡ್ ಕಾಂಡೋಸಾಟ್ ಗಳನ್ನು ಒಳಗೊಂಡಿದ್ದು ಅದನ್ನು ಥೇಲ್ಸ್ ಅಲೀನಿಯಾ ಸ್ಪೇಸ್ ಫಾರ್ ಹೆಲ್ಲಸ್ ಸ್ಯಾಟ್ ಮತ್ತು ಇನ್ಮಾರ್ಸಾಟ್ ತಯಾರಿಸಿದೆ. 

ಹೆಲ್ಲಸ್ ಸ್ಯಾಟ್ 3 ಘಟಕ ಪೂರ್ವಕ್ಕೆ 39ರ ಕಕ್ಷೆ ಸ್ಥಾನದಲ್ಲಿ ಯುರೋಪ್, ಮಧ್ಯ ಪೂರ್ವ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಸೇವೆಗಳನ್ನು ಒದಗಿಸಲಿದೆ.

ಜಾಗತಿಕ ಮೊಬೈಲ್ ಉಪಗ್ರಹ ಸಂವಹನ ಸೇವೆಗಳಲ್ಲಿ ಇಮ್ಮರ್ಸತ್ ಪ್ರಮುಖವಾಗಿದೆ. ವಿಎ238 ವಾಹಕದಲ್ಲಿ ಒಟ್ಟು ಪೆಲೊಡ್ ಗಳ ಗಾತ್ರ 10,177 ಕಿಲೋವಾಗಿದೆ.

ಇಸ್ರೊ ಉಡಾಯಿಸಿದ 21ನೇ ಉಪಗ್ರಹ ಜಿಸ್ಯಾಟ್ ಆಗಿದ್ದು ಕಕ್ಷೆಯಲ್ಲಿ ಇದರ ಜೀವಿತಾವಧಿ 15 ವರ್ಷಗಳಾಗಿವೆ.ಕಕ್ಷೆಗೆ ಸೇರಿಸಿದ ನಂತರ ಇಸ್ರೊದ ಕೇಂದ್ರ ನಿಯಂತ್ರಣ ವ್ಯವಸ್ಥೆಯಾದ ಹಾಸನದಿಂದ ಜಿಸ್ಯಾಟ್-17ನ ನಿಯಂತ್ರಣವಿರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT