ವಿಜ್ಞಾನ-ತಂತ್ರಜ್ಞಾನ

ಟೊಮ್ಯಾಟೊದಿಂದ ಟೈರ್ ತಯಾರಿಸಿದ ಸಂಶೋಧಕರು!

Srinivas Rao BV
ನ್ಯೂಯಾರ್ಕ್: ಕೈಗಾರಿಕೆಗಳಲ್ಲಿ ಎಷ್ಟು ಟೈರ್ ಗಳು ಉತ್ಪಾದನೆಯಾಗುತ್ತಿದೆಯೋ ಅಷ್ಟೇ ಟೈರ್ ಗಳು ಇನ್ನು ಮುಂದಿನ ದಿನಗಳಲ್ಲಿ ಜಮೀನಿನಿಂದಲೂ ತಯಾರಾಗುವ ಸಾಧ್ಯತೆ ಇದೆ. ಏಕೆಂದರೆ ಸಂಶೋಧಕರು ತ್ಯಾಜ್ಯ ಟೊಮ್ಯಾಟೋಗಳಿಂದ ಟೈರ್ ನ್ನು ತಯಾರಿಸಿದ್ದಾರೆ. 
ತ್ಯಾಜ್ಯ ಟೊಮ್ಯಾಟೋ ಹಾಗೂ ಮೊಟ್ಟೆಯ ಮೇಲ್ಭಾಗ (ಚಿಪ್ಪು) ಬಳಸಿಕೊಂಡು ರಬ್ಬರ್ ನ್ನು ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದು, ಟೈರ್ ಉತ್ಪಾದನೆಯನ್ನು ಪ್ರಮುಖವಾಗಿ ಬಳಸಲಾಗುವ ಪೆಟ್ರೋಲಿಯಂ ಆಧಾರಿತ ಫಿಲ್ಲರ್ ನ ಬದಲಿಗೆ ಆಹಾರದ ತ್ಯಾಜ್ಯಗಳನ್ನು ಬಳಕೆ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೈರ್ ನ ತಯಾರಿಕೆಯಲ್ಲಿ ಹೊಸ ಫಿಲ್ಲರ್ ಗಳನ್ನು ಬಳಸಿ ಮಾಡಿದ ರಬ್ಬರ್ ನ್ನು ಪರೀಕ್ಷಿಸಲಾಗಿದ್ದು, ಕೈಗಾರಿಕಾ ಗುಣಮಟ್ಟಕ್ಕಿಂತ ಹೆಚ್ಚಿದ್ದು ರಬ್ಬರ್ ತಯಾರಿಕೆ ಹೊಸ ಮಾದರಿ ಸಿಕ್ಕಂತಾಗಿದೆ. 
ಅಮೆರಿಕದ ಓಹಿಯೋ ಸ್ಟೇಟ್ ವಿಶ್ವವಿದ್ಯಾನಿಲಯದ ಕತ್ರಿನಾ ಕಾರ್ನಿಷ್ ಹಾಗೂ ಸಹೋದ್ಯೋಗಿಗಳು ಮೊಟ್ಟೆಯ ಮೇಲ್ಭಾಗ, ಟೊಮ್ಯಾಟೋ ಹಾಗೂ ಇತರ ತ್ಯಾಜ್ಯ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಟೈರ್ ನ ಉತ್ಪಾದನೆಗೆ ಸಹಕಾರಿಯಾಗುವ ಕಾರ್ಬನ್ ಬ್ಲಾಕ್ ನ್ನು ತಯಾರಿಸುವ ವಿಧಾನವನ್ನು ಕಂಡು ಹಿಡಿದಿದ್ದಾರೆ. 
ರಬ್ಬರ್ ನ ಗುಣಗಳನ್ನು ಪಡೆಯುವುದಕ್ಕೆ ತ್ಯಾಜ್ಯ ಟೊಮ್ಯಾಟೋ, ಮೊಟ್ಟೆಯ ಮೇಲ್ಭಾಗದ ಪದರವನ್ನು ಬಳಕೆ ಪರ್ಯಾಯವಾಗಿದ್ದು, ತ್ಯಾಜ್ಯಗಳ ಮರು ಬಳಕೆಯನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸಬಹುದಾಗಿದೆ ಎಂದು ಓಹಿಯೋ ಸ್ಟೇಟ್ ವಿಶ್ವವಿದ್ಯಾನಿಲಯದ ಸಂಶೋಧಕರು ತಿಳಿಸಿದ್ದಾರೆ. 
SCROLL FOR NEXT