ವಿಜ್ಞಾನ-ತಂತ್ರಜ್ಞಾನ

ಅಂಧರಿಗಾಗಿ ವಿಶೇಷ ಕನ್ನಡಕ ನಿರ್ಮಿಸಿದ 11ನೇ ತರಗತಿ ವಿದ್ಯಾರ್ಥಿ

Lingaraj Badiger
ಇಟಾನಾಗರ: ಅಂಧರ ಬಾಳು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ 11ನೇ ತರಗತಿಯ ವಿದ್ಯಾರ್ಥಿ ಅನಂಗ್ ತಡರ್, ಅಂಧರಿಗಾಗಿ ವಿಶೇಷ ಕನ್ನಡಗಳನ್ನು ಆವಿಷ್ಕರಿಸಿದ್ದಾನೆ,
ತಡರ್ ಶಬ್ದ ಗ್ರಹಿಸುವಂತಹ 'ಎಕೋಲೇಷನ್' ಬಳಸಿ ಗಾಂಗಲ್ ಫಾರ್ ಬ್ಲೈಂಡ್ (ಜಿ4ಬಿ) ಎಂಬ ಕನ್ನಡಕವನ್ನು ಆವಿಷ್ಕರಿಸಿದ್ದು, ಆತನ ಈ ವಿಶೇಷ ಆವಿಷ್ಕಾರಕ್ಕೆ ಇತ್ತೀಚಿಗೆ ಗುವಾಹತಿಯಲ್ಲಿ ನಡೆದ ಪ್ರಾದೇಶಿಕ ಮಟ್ಟದ ವಿಜ್ಞಾನ ಉತ್ಸವದಲ್ಲಿ ದಿನನಾಥ್ ಪಾಂಡೆ ಸ್ಮಾರ್ಟ್ ಐಡಿಯಾ ಇನ್ನೋವೇಶನ್ ಪ್ರಶಸ್ತಿ ಸಹ ಬಂದಿದೆ. ಈ ಕನ್ನಡಕಗಳು ಯಾವುದೇ ದೈಹಿಕ ಸ್ಪರ್ಶವಿಲ್ಲದೆ ಧ್ವನಿ ತರಂಗಗಳು ಮತ್ತು ಪ್ರತಿಧ್ವನಿಗಳು ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ.
ಮಾರ್ಚ್ 6ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನದಲ್ಲೂ ತಡರ್ ಭಾಗಿಯಾಗಿದ್ದು, ಆತನ ಆವಿಷ್ಕಾರದ ಬಗ್ಗೆ ಎನ್ಐಎಫ್, ಸೃಷ್ಟಿ ಹಾಗೂ ಯುನಿಸೆಫ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎನ್ಐಎಫ್ ಮತ್ತು ಯುನಿಸೆಫ್ ಜಿ4ಬಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿವೆ.
ಈ ವಿಶೇಷ ಕನ್ನಡಕಗಳ ಆವಿಷ್ಕಾರದ ಹೊರತಾಗಿಯೂ ಅನಂಗ್ ತಡರ್ ರೋಬೋಟ್ ಗಳ ನಿರ್ಮಾಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇತರೆ ಗೆಜೆಟ್ ಗಳನ್ನು ಸೃಷ್ಟಿಸುವ ಹವ್ಯಾಸ ಹೊಂದಿದ್ದಾನೆ.
SCROLL FOR NEXT