ಮುಂಬೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ದೇಶೀ ನಿರ್ಮಿತ ಸೋಲಾರ್ ಹೈಬ್ರೀಡ್ ಕಾರ್ ನ್ನು ಪ್ರದರ್ಶಿಸಿದ್ದು, ಸಂಪೂರ್ಣ ದೇಶೀ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾಗಿದೆ.
ತಿರುವನಂತ ಪುರಂ ನ ವಿಕ್ರಮ್ ಸಾರಭಾಯ್ ಬಾಹ್ಯಾಕಾಶ ಕೇಂದ್ರ(ವಿಎಸ್ಎಸ್ ಸಿ) ಯಲ್ಲಿ ಸೋಲಾರ್ ಕಾರನ್ನು ಪ್ರದರ್ಶಿಸಲಾಗಿದೆ ಎಂದು ಇಸ್ರೋ ಹೇಳಿದೆ. ಪಿಎಸ್ಎಲ್ ವಿ ಸೇರಿದಂತೆ ವಿವಿಧ ರೀತಿಯ ಉಪಗ್ರಹಗಳ ತಯಾರಿಕೆಯಲ್ಲಿ ವಿಎಸ್ಎಸ್ ಸಿ ನಿರತವಾಗಿದ್ದು, ಕಾರಿನ ಚಾಲನೆ ಕೂಡ ಯಶಸ್ವಿಯಾಗಿದೆ. ಕಾರಿನ ಪ್ರದರ್ಶನ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇಸ್ರೋ ಕಾರಿನ ದರವನ್ನು ಕಡಿಮೆ ಮಾಡುವುದರ ಬಗ್ಗೆ ಗಮನ ಹರಿಸುತ್ತಿದೆ.
ತೈಲ ಇಂಧನ ಚಾಲಿತ ವಾಹನಗಳು ಜೀವಿಗಳಿಗೆ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದು, ಮಾಲಿನ್ಯ ರಹಿತ ವಾಹನಗಳು ಸಾರಿಗೆ ವ್ಯವಸ್ಥೆಗೆ ಪರಿಚಯವಾಗಬೇಕು ಎಂದು ಹೇಳಿದೆ.
ಲಿಥಿಯಮ್ ಇಯೋನ್ ಬ್ಯಾಟರಿಗಳಿಂದ ಇಸ್ರೋ ಕಾರು ಸಂಚರಿಸಲಿದ್ದು, ಸೌರಶಕ್ತಿಯಿಂದಲೂ ಸಹ ಕಾರುಗಳ ಬ್ಯಾಟರಿಯನ್ನು ಚಾರ್ಚ್ ಮಾಡಬಹುದಾಗಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ.