ಇಸ್ರೋದ ಪಿಎಸ್ಎಲ್ ವಿ-ಸಿ37/ಕಾರ್ಟೊಸ್ಯಾಟ್ 2. 
ವಿಜ್ಞಾನ-ತಂತ್ರಜ್ಞಾನ

ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ

ಭಾರತದ ಏಕೈಕ ಬಾಹ್ಯಾಕಾಶ ಕೇಂದ್ರ ಶ್ರೀಹರಿ ಕೋಟಾದಿಂದ ಜಿಎಸ್ಎಲ್ ವಿ-09 ಉಪಗ್ರಹ ನಿನ್ನೆ...

ನವದೆಹಲಿ: ಭಾರತದ ಏಕೈಕ ಬಾಹ್ಯಾಕಾಶ ಕೇಂದ್ರ ಶ್ರೀಹರಿ ಕೋಟಾದಿಂದ ಜಿಎಸ್ಎಲ್ ವಿ-09 ಉಪಗ್ರಹ ನಿನ್ನೆ ಉಡಾವಣೆಗೊಳ್ಳುವ ಮೂಲಕ ಇಸ್ರೋದ ಮತ್ತೊಂದು ಬಾಹ್ಯಾಕಾಶ ಯಾನಕ್ಕೆ ನಿನ್ನೆ ಸಾಕ್ಷಿಯಾಯಿತು.
ಕಳೆದ ಫೆಬ್ರವರಿ 15ರಂದು ಭಾರತ 104 ಸ್ಯಾಟಲೈಟ್ ಗಳನ್ನು ಒಂದು ರಾಕೆಟ್ ನಲ್ಲಿ ಉಡಾಯಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಮಾಮ್ ನಿಂದ ಜಿಎಸ್ಎಲ್ ವಿ-9 ವರೆಗೆ ಆರ್ಯಭಟದಿಂದ ಇಲ್ಲಿಯವರೆಗೆ ಭಾರತ ಉಪಗ್ರಹ ಉಡಾವಣೆಯಲ್ಲಿ ಬಹುದೂರ ಸಾಗಿ ಬಂದಿದೆ.
ಹಳೆಯ ನೆನಪಿನ ಬುತ್ತಿಯನ್ನು ಕೆದಕಿದಾಗ ಇಸ್ರೋದ ಮಹತ್ವದ ಹೆಜ್ಜೆ ಗುರುತುಗಳನ್ನು ನೋಡಬಹುದು.
1975, ಆರ್ಯಭಟ: ಭಾರತದ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹ ಆರ್ಯಭಟವನ್ನು ಸೋವಿಯತ್ ಒಕ್ಕೂಟ ಉಡಾಯಿಸಿತು. ಅಂತರಿಕ್ಷದಲ್ಲಿ 19 ವರ್ಷಗಳ ಕಾಲ ಪ್ರಯಾಣ ಮಾಡಿ ಭೂ ಕಕ್ಷೆಯನ್ನು ಮರು ಪ್ರವೇಶಿಸಿತು. ಖಗೋಳಶಾಸ್ತ್ರ ಮತ್ತು ಸೌರ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಆರ್ಯಭಟ ಉಪಗ್ರಹವನ್ನು ಬಳಸಲಾಯಿತು.
1979, ಭಾಸ್ಕರ್: ಅರಣ್ಯ, ಜಲ ವಿಜ್ಞಾನ, ಭೂ ವಿಜ್ಞಾನಕ್ಕೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸಲು ಈ ಉಪಗ್ರಹವನ್ನು ಬಳಸಿಕೊಳ್ಳಲಾಗುತ್ತಿದ್ದು ಕಾಪುಸ್ತಿನ್ ಯಾರ್ ನಲ್ಲಿ ಉಡಾಯಿಸಲಾಯಿತು. ಭಾಸ್ಕರ್ ಮೂಲಕವೇ ಟಿ ವಿ ಮತ್ತು ಕ್ಯಾಮರಾಗಳ ಆರಂಭವಾಯಿತು.
1980, ರೋಹಿಣಿ: ಎಸ್ಎಲ್ ವಿ-3 ಹಾಗೂ ರೋಹಿಣಿಯನ್ನು ಒಟ್ಟಿಗೆ ಎರಡನೇ ಪ್ರಯೋಗಾತ್ಮಕ ಉಪಗ್ರಹವಾಗಿ ಉಡಾಯಿಸಲಾಯಿತು. ಕಾರ್ಯಾಚರಣೆ ಯಶಸ್ವಿಯಾಯಿತು.
1981,ಭಾಸ್ಕರ 2: ಭೂ ಕಕ್ಷೆಗೆ 1991ರಲ್ಲಿ ಮರು ಪ್ರವೇಶಿಸಿತು ಹಾಗೂ ಭೂಮಿ ಮತ್ತು ನೀರಿನ ವಲಯಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿತು. ಅಸಮರ್ಪಕವಾಗಿ ಕೆಲಸ ಮಾಡಿದ ಎರಡು ಕ್ಯಾಮರಾಗಳಲ್ಲಿ ಒಂದನ್ನು ಸುಮಾರು 2,000 ಚಿತ್ರಗಳನ್ನು ವಾಪಸ್ಸು ಕಳುಹಿಸಲಾಯಿತು.
1982, ಇನ್ಸಾಟ್-1 ಎ: ಅಮೆರಿಕಾ ರಾಕೆಟ್ ಮೂಲಕ ಉಡಾಯಿಸಲಾದ ಸಂವಹನ ಉಪಗ್ರಹ. ಇದು ನಮ್ಮ ದೇಶದ ಮೊದಲ ಹವಾಮಾನಶಾಸ್ತ್ರ ಉಪಗ್ರಹವಾಗಿದೆ.
1983, ಇನ್ಸಾಟ್-2ಬಿ: ಇನ್ಸಾಟ್-1ಎಯ ಪ್ರತಿಬಿಂಬವಾಗಿದ್ದು 7 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದೆ.
1988, ಐಆರ್ಎಸ್-1ಎ: ರಷ್ಯಾ ರಾಕೆಟ್ ಮೂಲಕ ಉಡಾವಣೆಗೊಂಡ  ಭಾರತೀಯ ರಿಮೋಟ್ ಸೆನ್ಸಿಂಗ್(ಐಆರ್ಎಸ್) ಉಪಗ್ರಹವಾಗಿದೆ. ಆದರೆ ಈ ಕಾರ್ಯಾಚರಣೆ ವಿಫಲವಾಯಿತು.
1992, ಇನ್ಸಾಟ್-2ಡಿಟಿ: 1,360 ಕೆಜಿ ತೂಕದ ಈ ಉಪಗ್ರಹವನ್ನು ಆರಂಭದಲ್ಲಿ ಅರಬ್ ಮತ್ತು ನಂತರ ಭಾರತೀಯ ಸಂವಹನ ಉಪಗ್ರಹವಾಗಿ ಉಡಾಯಿಸಲಾಯಿತು. ಉದನ್ನು ಫ್ರಾನ್ಸ್ ನ ಗಯಾನಾದಲ್ಲಿ ಉಡಾಯಿಸಲಾಯಿತು.
1994,ವಿಸ್ತರಿಸಿದ ರೋಹಿಣಿ ಉಪಗ್ರಹ ಸರಣಿ: ಅಂತರಿಕ್ಷಕ್ಕೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪೇ ಲೋಡ್ಸ್ ಗಳನ್ನು ಹೊತ್ತೊಯ್ದ ಗುಂಪು ಉಪಗ್ರಹಗಳು .ಗಾಮಾ ಕಿರಣ ಸ್ಫೋಟಗಳನ್ನು ಕಂಡುಹಿಡಿಯುವಲ್ಲಿ ಇದು ಸಹಾಯ ಮಾಡಿದೆ.
1997, ಐಆರ್ಎಸ್ 1-ಡಿ: ದೂರಸ್ಥ ಸಂವೇದನಾ ಉಪಗ್ರಹಗಳಲ್ಲಿ ಇದು ಏಳನೆಯದಾಗಿದೆ. ಇದನ್ನು ಇಸ್ರೋ ನಿರ್ಮಿಸಿ ಉಡಾಯಿಸಿ,ಕಾರ್ಯನಿರ್ವಹಿಸಿದ ಉಪಗ್ರಹವಾಗಿದೆ. 12 ವರ್ಷಗಳ ಸೇವೆ ನಂತರ 2010ರಲ್ಲಿ ಪೂರ್ಣಗೊಂಡಿತು.
2001, ಜಿಸ್ಯಾಟ್-1:ಜಿಎಸ್ಎಲ್ ವಿ ಅಧಿಕ ಭಾರದ ರಾಕೆಟ್ ನ್ನು ಜಿಸ್ಯಾಟ್-1 ಮೂಲಕ ಯಶಸ್ವಿಯಾಗಿ ಉಡಾಯಿಸಿತು.
2002, ಕಲ್ಪನ-1: ಮೆಟ್ ಸಾಟ್ ದೇಶದ ಮೊದಲ ಮೀಸಲಾದ ಹವಾಮಾನ ಉಪಗ್ರಹವಾಗಿದ್ದು ಅದಕ್ಕೆ ಕಲ್ಪನ ಎಂದು ಮರು ನಾಮಕರಣ ಮಾಡಲಾಯಿತು. ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಡಲಾಯಿತು. ಏಳು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು ಹವಾಮಾನ ಮತ್ತು ಪರಿಸರದ ಸಂಬಂಧಿತ ಮಾಹಿತಿಯನ್ನು ಒಟ್ಟುಗೂಡಿಸಲು ಬಳಸಲಾಗಿದೆ.
2004, ಎಜುಸ್ಯಾಟ್: ದೇಶದ ಮೊದಲ ಶಿಕ್ಷಣ ಆಧಾರಿತ ಉಪಗ್ರಹವಾಗಿದ್ದು, ಸ್ಮಾರ್ಟ್ ತರಗತಿಗಳ ಪರಿಕಲ್ಪನೆ ಇದರಿಂದ ಹುಟ್ಟಿಕೊಂಡಿತು. ಎರಡು ಮಾರ್ಗಗಳ ಮೂಲಕ ಸಂವಹನ ಇದರಲ್ಲಿ ಸಾಧ್ಯವಿದ್ದು ತರಗತಿಗಳಿಗೆ ಶಿಕ್ಷಣದ ಸಾಮಗ್ರಿಗಳನ್ನು ಪೂರೈಸುತ್ತದೆ.
2005, ಕಾರ್ಟೊಸ್ಯಾಟ್-1: ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಇದನ್ನು ಉಡಾಯಿಸಲಾಯಿತು. ಪ್ರಾದೇಶಿಕ, ಸ್ಪೆಕ್ಟ್ರಲ್ ಮತ್ತು ರೇಡಿಯೊಮೆಟ್ರಿಕ್ ನಿರ್ಣಯಗಳನ್ನು ಸುಧಾರಿಸುವ ಕಾರ್ಯಾಚರಣೆ ಮತ್ತು ಅಂಕಿಅಂಶಗಳ ಸಂಗ್ರಹವನ್ನು ಹೊಂದಿದೆ.
2007, ಕಾರ್ಟೊಸ್ಯಾಟ್-2: ಸ್ಪೇಸ್ ಕ್ಯಾಪ್ಸುಲ್ ರಿಕವರಿ ಪ್ರಯೋಗ ಮತ್ತು ಎರಡು ವಿದೇಶಿ ಸ್ಯಾಟಲೈಟ್ ಗಳ ಉಡಾವಣೆಯನ್ನು ಇದು ಹೊಂದಿದೆ. 
2008, ಚಂದ್ರಯಾನ: ಶ್ರೀ ಹರಿಕೋಟಾದಿಂದ ಮೊದಲ ಚಂದ್ರ ಪರಿಶೋಧನೆ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಇದು ಎರಡು ವರ್ಷಗಳ ಜೀವಿತಾವಧಿ ಹೊಂದಿತ್ತು. ಗ್ರಹಗಳ ಮತ್ತು ದೂರಸ್ಥ ಸಂವೇದನಾ ಕ್ಷೇತ್ರಗಳನ್ನು ಒಳಗೊಂಡಿದೆ.
2011, ಯೂತ್ ಸ್ಯಾಟ್: ಭಾರತ-ರಷ್ಯಾ ಜಂಟಿಯಾಗಿ ಉಡಾಯಿಸಿದ ಉಪಗ್ರಹವಿದು. ಪದವಿ, ಸ್ನಾತಕ ಪದವಿ ಮತ್ತು ಸಂಶೋಧನಾ ತಜ್ಞರನ್ನು ಒಟ್ಟಿಗೆ ತರುತ್ತದೆ. ಭಾರತದ ಮಿನಿ ಸ್ಯಾಟಲೈಟ್ ಸರಣಿಯ ಭಾಗವಾಗಿದ್ದು ಎರಡನೆಯದಾಗಿದೆ.
2013, ಮಾಮ್: ಮಂಗಳಯಾನ ಎಂದು ಕರೆಯಲ್ಪಡುವ ಮಾರ್ಸ್ ಆರ್ಬಿಟರ್ ಮಿಷನ್ ಅಂತರಗ್ರಹ ಸ್ಥಳಕ್ಕೆ ಭಾರತದ ಮೊದಲ ಬಾಹ್ಯಾಕಾಶ ಪ್ರಯಾಣವಾಗಿದೆ.
2014, ಜಿಸ್ಯಾಟ್ 16: ಸಂವಹನ ಉಪಗ್ರಹ. ತೆರೆದ-ಸಾಮರ್ಥ್ಯದ ಆಂಟೆನಾವನ್ನು ಜಿಸ್ಯಾಟ್ 16 ಒಳಗೊಂಡಿದೆ. 
2015, ಜಿಸ್ಯಾಟ್ 15: ಕು ಬಾಂಡ್ ನಲ್ಲಿ ಹೊತ್ತೊಯ್ಯುವ ಸಂವಹನ ಟ್ರಾನ್ಸ್ಪೋರ್ಡರ್ಗಳನ್ನು ಒಳಗೊಂಡಿದೆ. 
2016, ಸ್ಕ್ಯಾಟ್ ಸಾಟ್-1: ಚಂಡಮಾರುತ, ಗಾಳಿ, ಹವಾಮಾನ ಮುನ್ಸೂಚನೆ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತದೆ. 5 ವರ್ಷಗಳ ಜೀವಿತಾವಧಿ ಹೊಂದಿದೆ.
2017, ಕಾರ್ಟೊಸ್ಯಾಟ್ 2 ಡಿ: ಪಿಎಸ್ಎಲ್ ವಿ ಒಂದು ಉಡಾವಣಾ ವಾಹಕದ ಮೂಲಕ ಏಕಕಾಲಕ್ಕೆ 104 ಸ್ಯಾಟಲೈಟ್ ಗಳನ್ನು ಉಡಾಯಿಸಿ ಇತಿಹಾಸ ನಿರ್ಮಿಸಿತು.
2017, ಜಿಸ್ಯಾಟ್-9: ದಕ್ಷಿಣ ಏಷ್ಯಾ ದೇಶಗಳಿಗೆ ನೆರೆಯ ರಾಷ್ಟ್ರಗಳಿಗೆ ಭಾರತ ನೀಡಿದ ಕೊಡುಗೆಯಿದು. ಸಂವಹನ ಉಪಗ್ರಹ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT