ವಿಜ್ಞಾನ-ತಂತ್ರಜ್ಞಾನ

ರಾನ್ಸಮ್ ವೇರ್ ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ 5 ಟಿಪ್ಸ್

Srinivas Rao BV
ರಾನ್ಸಮ್ ವೇರ್ ಸೈಬರ್ ದಾಳಿ ಜಾಗತಿಕ ಸಂಚಲನ ಮೂಡಿಸಿದೆ. ರಾನ್ಸಮ್ ವೇರ್ ಸೈಬರ್ ದಾಳಿಗಳಲ್ಲಿ ಹ್ಯಾಕರ್ ಗಳು ವೈರಸ್ ಗಳನ್ನು ಇ-ಮೇಲ್ ಮುಖಾಂತರ ಅಥವಾ ಪಾಪ್ ಅಪ್ ಮುಖಾಂತರ ರವಾನಿಸುತ್ತಾರೆ. ಒಂದೊಮ್ಮೆ ಬಳಕೆದಾರರು ಅದನ್ನು ತೆರೆದರೆ ರಾನ್ಸಮ್ ಸಾಫ್ಟ್ ವೇರ್ ಡೌನ್ ಲೋಡ್ ಆಗುತ್ತದೆ. ಇದಾದ ಬಳಿಕ ಹ್ಯಾಕರ್ ಗಳಿಗೆ ಕಂಪ್ಯೂಟರ್ ನಲ್ಲಿರುವ ದಾಖಲೆಗಳನ್ನು ಹ್ಯಾಕ್ ಮಾಡುವುದು ಸುಲಭವಾಗಲಿದೆ. ಹಾಗಾದರೆ ರಾನ್ಸಮ್ ವೇರ್ ದಾಳಿಯಿಂದ ಹೇಗೆ ನಮ್ಮ ದಾಖಲೆಗಳನ್ನು ರಕ್ಷಿಸಿಕೊಳ್ಳಬಹುದು ಎಂಬ ಬಗ್ಗೆ 5 ಮುಖ್ಯ ಸಲಹೆಗಳು ಇಲ್ಲಿವೆ.  
  • ಒಮ್ಮೆ ಕಂಪ್ಯೂಟರ್ ನಲ್ಲಿರುವ ಫೈಲ್ಸ್ ಗಳು ಎನ್ ಕ್ರಿಪ್ಟ್ (ಗೂಢಲಿಪೀಕರಣ) ಆದರೆ ಕಂಪ್ಯೂಟರ್ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳಿರುವುದಿಲ್ಲ. ಇರುವ ಕಡಿಮೆ ಆಯ್ಕೆಗಳಲ್ಲಿ ಬ್ಯಾಕ್ ಅಪ್ ಸಹ ಒಂದಾಗಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್ ಪ್ರಮಾಣದ ದಾಖಲೆಗಳನ್ನು ಯಾರೂ ಬ್ಯಾಕ್ ಅಪ್ ಇಟ್ಟುಕೊಂಡಿರುವುದಿಲ್ಲ. ಆದ್ದರಿಂದ ಅತ್ಯಗತ್ಯವಾಗಿರುವ ದಾಖಲೆಗಳನ್ನು ನೆಟ್ವರ್ಕ್ ನಿಂದ ಡಿಸ್ಕನೆಕ್ಟ್ ಆಗಿರುವ ಡ್ರೈವ್ ನಲ್ಲಿ ಇರಿಸುವುದು ಉತ್ತಮ. 
  •  ಮೈಕ್ರೋ ಸಾಫ್ಟ್ ವಿಂಡೋಸ್ ನಲ್ಲಿರುವ ಭದ್ರತಾ ರಹಸ್ಯದಿಂದಾಗಿ ಪ್ರಸ್ತುತ ರಾನ್ಸಮ್ ವೇರ್ ಸೈಬರ್ ದಾಳಿ ಯಶಸ್ವಿಯಾಗಿದ್ದು, ಮಾರ್ಚ್ ನಲ್ಲಿ ಮೈಕ್ರೋಸಾಫ್ಟ್ ಪರಿಚಯಿಸಿದ್ದ ಸಾಫ್ಟ್ ವೇರ್ ಫಿಕ್ಸ್ ನ್ನು ಅಪ್ ಡೇಟ್ ಮಾಡಿಕೊಳ್ಳದೇ ಇದ್ದ ಕಂಪ್ಯೂಟರ್ ಗಳಲ್ಲಿನ ದಾಖಲೆಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ. 
  • ಅನುಮಾನಾಸ್ಪದ ಲಿಂಕ್ ಅಥವಾ ಅಟ್ಯಾಚ್ ಮೆಂಟ್ ಗಳನ್ನು ಕ್ಲಿಕ್ ಮಾಡಬೇಡಿ. ಕಂಪನಿಗಳು ಈ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಿ, ಕೆಲಸಕ್ಕೆ ಸಂಬಂಧಿಸಿದಂತಹ ಲಿಂಕ್ ಹಾಗೂ ಅಟ್ಯಾಚ್ ಮೆಂಟ್ ಗಳನ್ನು ಕ್ಲಿಕ್ ಮಾಡದಂತೆ ಎಚ್ಚರ ವಹಿಸಬೇಕು.
  • ಕಂಪ್ಯೂಟರ್ ಗಳನ್ನು ಡಿಸ್ಕನೆಕ್ಟ್ ಮಾಡುವುದು ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಇರುವ ಪರಿಹಾರವಲ್ಲ. ಒಮ್ಮೆ ಹ್ಯಾಕರ್ ಗಳು ದಾಖಲೆಗಳನ್ನು ಲಾಕ್ ಮಾಡಿ ಹಣ ನೀಡಿದರೆ ಮಾತ್ರ ಪುನಃ ದಾಖಲೆಗಳನ್ನು ಪಡೆಯಬಹುದು ಎಂಬ ನಿರ್ಬಂಧ ವಿಧಿಸುತ್ತಾರೆ. ಆದರೆ ಹಣ ನೀಡಿದರೂ ಸಹ ದಾಖಲೆಗಳನ್ನು ಪುನಃ ಪಡೆಯುವುದಕ್ಕೆ ಸಾಧ್ಯಾವುವ ಬಗ್ಗೆ ಯಾವುದೇ ಖಾತ್ರಿ ಇಲ್ಲ. 
  •  ರಾನ್ಸಮ್ ವೇರ್ ನ ವನ್ನಾ ಕ್ರೈ ವೈರಸ್ ನಿಂದ ದಾಖಲೆಗಳನ್ನು ರಕ್ಷಿಸಲು ಆಂಟಿ ವೈರಸ್  ತಂತ್ರಾಂಶವನ್ನು ಬಳಸಿ 
SCROLL FOR NEXT