ಸಂಗ್ರಹ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಸೈಬರ್ ದಾಳಿ ಹಿಂದೆ ಉತ್ತರ ಕೊರಿಯಾ ಕೈವಾಡ?

ವಿಶ್ವಾದ್ಯಂತದ ಸುಮಾರು 150ಕ್ಕೂ ಅಧಿಕ ದೇಶಗಳ ಸುಮಾರು ಎರಡು ಲಕ್ಷ ಕಂಪ್ಯೂಟರ್‌ ಗಳ ಮೇಲೆ ದಾಳಿ ಮಾಡಿರುವ ವನ್ನಾ ಕ್ರೈ ರಾನ್‌ ಸಮ್‌ ವೇರ್‌ ದಾಳಿಯ ಹಿಂದೆ ಉತ್ತರ ಕೊರಿಯಾದ ಕೈವಾಡವಿದೆ ಎಂದು ಶಂಕಿತಸಲಾಗುತ್ತಿದೆ.

ನವದೆಹಲಿ: ವಿಶ್ವಾದ್ಯಂತದ ಸುಮಾರು 150ಕ್ಕೂ ಅಧಿಕ ದೇಶಗಳ ಸುಮಾರು ಎರಡು ಲಕ್ಷ ಕಂಪ್ಯೂಟರ್‌ ಗಳ ಮೇಲೆ ದಾಳಿ ಮಾಡಿರುವ ವನ್ನಾ ಕ್ರೈ ರಾನ್‌ ಸಮ್‌ ವೇರ್‌ ದಾಳಿಯ ಹಿಂದೆ ಉತ್ತರ ಕೊರಿಯಾದ ಕೈವಾಡವಿದೆ ಎಂದು ಶಂಕಿತಸಲಾಗುತ್ತಿದೆ.

ಈ ಬಗ್ಗೆ ಖ್ಯಾತ ಗೂಗಲ್ ಸಂಸ್ಥೆ ಭದ್ರತಾ ಸಂಶೋಧಕರಾಗಿರುವ ಭಾರತೀಯ ನೀಲ್‌ ಮೆಹ್ತಾ ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಉತ್ತರ ಕೊರಿಯದ ಪರವಾಗಿ ಕೆಲಸ ಮಾಡುತ್ತಿರುವ ಕುಖ್ಯಾತ ಲಾಝರಸ್‌  ಸಮೂಹವು ಈ ರಾನ್‌ಸಮ್‌ವೇರ್‌ ದಾಳಿಯ ಹಿಂದಿರುವ ಸಾಧ್ಯತೆ ಇದೆ ಹೇಳಿದ್ದಾರೆ. ವನ್ನಾ ಕ್ರಿಪ್ಟ್ ನಲ್ಲಿ ಬಳಸಲಾಗಿರುವ ಕೋಡಿಂಗ್‌ ಮತ್ತು ಟೂಲ್ಸ್‌ಗಳನ್ನೇ ಬಳಸಿಕೊಂಡು ಈ ಹಿಂದೆಯೂ ಲಾಝರಸ್‌ ಹ್ಯಾಕಿಂಗ್‌ ಸಮೂಹ ಈ  ರೀತಿಯ ಕುತಂತ್ರಾಂಶವನ್ನು ರೂಪಿಸಿತ್ತು. ಇದೀಗ ಮೈಕ್ರೋಸಾಫ್ಟ್ ಆಪರೇಟಿಂಗ್‌ ಸಿಸ್ಟಮನ್ನು ಹ್ಯಾಕ್‌ ಮಾಡುವುದಕ್ಕೆ ವನ್ನಾ ಕ್ರಿಪ್ಟ್ ಬಳಸಲಾಗಿದೆ ನೀಲ್ ಮೆಹ್ತಾ ಶಂಕೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಮೆಹ್ತಾ ಅವರು ವನ್ನಾ ಕ್ರಿಪ್ಟ್ ರಾನ್‌ ಸಮ್‌ ದಾಳಿಗೆ ರೂಪಿಸಲಾದ ಕುತಂತ್ರಾಂಶಕ್ಕೂ ಕುಖ್ಯಾತ ಲಾಝರಸ್‌ ಸಮೂಹದ ಈ ಹಿಂದೆ ದಾಳಿ ಮಾಡಿದ್ದ ಕುತಂತ್ರಾಂಶಕ್ಕೂ ಸಾಮ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಆ ಕೋಡ್  ಗಳನ್ನು ಟ್ವಿಟರ್‌ನಲ್ಲಿ ಕೂಡ ಪೋಸ್ಟ್‌ ಮಾಡಿದ್ದಾರೆ.

ಕೇವಲ ನೀಲ್ ಮೆಹ್ತಾ ಮಾತ್ರವಲ್ಲದೇ ಖ್ಯಾತ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಬಿಬಿಸಿ ಕೂಡ ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ನೀಲ್ ಮೆಹ್ತಾ ಅವರ ಟ್ವೀಟ್ ಆಧಾರದ ಮೇಲೆ ಸುದ್ದಿ ಬಿತ್ತರಿಸಿದೆ.

ಭಾರತೀಯ ನೀಲ್ ಮೆಹ್ತಾ ಅವರು, ಬ್ರಿಟಿಷ್‌ ಕೊಲಂಬಿಯಾ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಈ ಹಿಂದೆ ಐಬಿಎಂ ಇಂಟರ್‌ ನೆಟ್‌ ಸೆಕ್ಯುರಿಟಿ ಸಿಸ್ಟಮ್‌ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT