ಐಆರ್ ಎನ್ಎಸ್ಎಸ್-1G ಉಡಾವಣೆಯನ್ನು ವೀಕ್ಷಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.
ಇಂಡಿಯನ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (ಐಆರ್ ಎನ್ಎಸ್ಎಸ್) ನಾವಿಕ್ ನ ಅಂತಿಮ ಹಂತದ ಪರೀಕ್ಷೆ ನಡೆಯುತ್ತಿದ್ದು, 2018 ರ ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಅಹಮದಾಬಾದ್ ನ ಮೂಲದ ಸ್ಪೇಸ್ ಅಪ್ಲಿಕೇಷನ್ ಕೇಂದ್ರ (ಎಸ್ಎಸಿ) ದ ತಪನ್ ಮಿಶ್ರ ಹೇಳಿದ್ದಾರೆ.
ಐಆರ್ ಎನ್ಎಸ್ಎಸ್ ಕಾರ್ಯಾಚರಣೆಗೆ ಅಗತ್ಯವಿದ್ದ 7 ಉಪಗ್ರಹ (ಐಆರ್ ಎನ್ಎಸ್ಎಸ್-1G) ಭಾರತ 2016 ರ ಏಪ್ರಿಲ್ 28 ರಂದು ಉಡಾವಣೆ ಮಾಡಿತ್ತು. ಐಆರ್ ಎನ್ಎಸ್ಎಸ್ ಗೆ ಪ್ರಧಾನಿ ನರೇಂದ್ರ ಮೋದಿ ನಾವಿಕ್ ಎಂದು ನಾಮಕರಣ ಮಾಡಿದ್ದು, ಭಾರತದ ಪ್ರದೇಶಗಳ ಬಗ್ಗೆ ನಿಖರವಾದ ಮಾಹಿತಿ ನೀಡಲಿದೆ.
24 ಉಪಗ್ರಹಗಳನ್ನು ಹೊಂದಿರುವ ಅಮೆರಿಕಾದ ಜಿಪಿಎಸ್ ಇಡಿ ವಿಶ್ವದ ಪ್ರದೇಶಗಳ (ಪೊಸಿಷನಿಂಗ್) ಬಗ್ಗೆ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ ಕೇವಲ 7 ಉಪಗ್ರಹಳನ್ನು ಹೊಂದಿರುವ ಭಾರತದ ನಾವಿಕ್ ವ್ಯವಸ್ಥೆ ಭಾರತ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ಬಗ್ಗೆ ಮಾತ್ರ ಮಾಹಿತಿ ನೀಡಲಿದೆಯಾದರೂ ಅಮೆರಿಕಾದ ಜಿಪಿಎಸ್ ಗಿಂತ ನಿಖರವಾದ ವ್ಯವಸ್ಥೆಯಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos