ವಿಜ್ಞಾನ-ತಂತ್ರಜ್ಞಾನ

ರಿವೆಂಜ್ ಪೋರ್ನ್ ತಡೆಗೆ ಫೇಸ್ ಬುಕ್ ನಲ್ಲಿ ನಿಮ್ಮದೇ ಚಿತ್ರವನ್ನು ನಿಮಗೇ ಕಳಿಸಿಕೊಳ್ಳಿ!

Srinivas Rao BV
ಸಿಡ್ನಿ: ಹೆಡ್ಡಿಂಗ್ ನೋಡಿಯೇ ಇದೇನು ವಿಚಿತ್ರ ಎನಿಸಿರಬೇಕಲ್ವಾ? ಹೌದು, ಸರಿಯಾಗಿಯೇ ಓದಿದ್ದೀರ, ರಿವೆಂಜ್ ಪೋರ್ನ್ ತಡೆಗಟ್ಟಲು ಫೇಸ್ ಬುಕ್ ಕಂಡುಕೊಂಡಿರುವ ಮಾರ್ಗ ಇದು. 
ರಿವೆಂಜ್ ಪೋರ್ನ್ ಗೆ ಕಡಿವಾಣ ಹಾಕಲು ಈ ಮಾರ್ಗವನ್ನು ಕಂಡುಕೊಂಡಿದ್ದು, ಈ ಚಿತ್ರಕ್ಕಾಗಿ ಡಿಜಿಟಲ್ ಫಿಂಗರ್ ಪ್ರಿಂಟ್ ಸೃಷ್ಟಿಸಿ ಅದನ್ನು ಒಪ್ಪಿಗೆ ಇಲ್ಲದ ಚಿತ್ರ ಎಂದು ಮಾರ್ಕ್ ಮಾಡಲಾಗುತ್ತದೆ. ಒಂದು ವೇಳೆ ಯಾರಾದರೂ ದುರುದ್ದೇಶದಿಂದ ಯಾವುದೇ ವ್ಯಕ್ತಿಯ ಅಶ್ಲೀಲ ಚಿತ್ರ ಅಪ್ ಲೋಡ್ ಮಾಡಲು ಯತ್ನಿಸಿದರೆ, ರಿವೆಂಜ್ ಪೋರ್ನ್ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದನ್ನು ತಡೆಗಟ್ಟಲು ನೀವು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. 
ಖಾಸಗಿ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಳ್ಳುವ ಭಯ ಇದ್ದರೆ, ನಿಮ್ಮ ಫೋಟೊಗಳನ್ನು ನೀವೇ ಮೆಸೆಂಜರ್ ನಲ್ಲಿ ಕಳಿಸಿಕೊಳ್ಳಬಹುದು ನಂತರ ಅದನ್ನು ಒಪ್ಪಿಗೆ ಇಲ್ಲದ ಚಿತ್ರ ಎಂದು ಮಾರ್ಕ್ ಮಾಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ. 
SCROLL FOR NEXT