ವಿಜ್ಞಾನ-ತಂತ್ರಜ್ಞಾನ

ಮನುಕುಲದ ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ಬಳಿಗೆ ನಾಸಾ ವಿಮಾನ: ಜುಲೈ ನಲ್ಲಿ ಉಡ್ಡಯನ

Srinivas Rao BV
ವಾಷಿಂಗ್ ಟನ್: ಸೂರ್ಯ ಯಾನಕ್ಕಾಗಿ ನಾಸಾ ಈಗಾಗಲೇ ಭರದ ಸಿದ್ಧತೆ ನಡೆಸಿದ್ದು, ಇದು ಮನುಕುಲದ ಇತಿಹಾಸದಲ್ಲೇ ಮೊದಲ ಬಾರಿಯ ಪ್ರಯೋಗವಾಗಿದೆ. 
ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಜುಲೈ ನಲ್ಲಿ ಉಡಾವಣೆಯಾಗುವ ನಿರೀಕ್ಷೆ ಇದ್ದು, ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್ ನಿಂದ ಉಡಾವಣೆಯಾಗಲಿದ್ದು, ಮನುಷ್ಯ ನಿರ್ಮಿಸಿರುವ ಯಾವುದೇ  ಬಾಹ್ಯಾಕಾಶ ವಸ್ತುವಿಗಿಂತಲೂ ಸೌರ ಮಂಡಲದ ಪ್ರಭಾವಲಯದ ಹತ್ತಿರದಲ್ಲಿ ಪಾರ್ಕರ್ ಸೋಲಾರ್ ಪ್ರೋಬ್ ಕಾರ್ಯನಿರ್ವಹಣೆ ಮಾಡಲಿದೆ. 
ಅತಿ ಹೆಚ್ಚು ತಾಪಮಾನ ಹಾಗೂ ವಿಕಿರಣಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರೌವ ಪಾರ್ಕರ್ ಸೋಲಾರ್ ಪ್ರೋಬ್, ಸೂರ್ಯನಿಗೆ ಸಂಬಂಧಿಸಿದ ಮೂಲಭೂತ ವಿಜ್ಞಾನ, ಸೂರ್ಯನ ಬಾಹ್ಯ ವಾತಾವರಣದ ಬಗ್ಗೆ ಮತ್ತಷ್ಟು ಆಳವಾದ ಅಧ್ಯಯನಕ್ಕೆ ಸಹಕಾರಿಯಾಗಲಿದೆ.
SCROLL FOR NEXT