ವಿಜ್ಞಾನ-ತಂತ್ರಜ್ಞಾನ

ಆಪ್ ಡೌನ್ ಲೋಡ್ ಅಂಕಿ-ಅಂಶ: ಈ ವಿಷಯದಲ್ಲಿ ಭಾರತೀಯರೇ ಮುಂದು!

Srinivas Rao BV
ಸ್ಮಾರ್ಟ್ ಫೋನ್ ಅತ್ಯಂತ ಸುಗಮವಾಗಿ ಕಾರ್ಯನಿರ್ವಹಿಸಬೇಕಾದರೆ 50 ಕ್ಕಿಂತ ಹೆಚ್ಚು ಆಪ್ ಗಳನ್ನು ಹೊಂದಿರುವುದು ಸೂಕ್ತವಲ್ಲ. ಕೆಲವೊಮ್ಮೆ 200 ಕ್ಕೂ ಹೆಚ್ಚು ಆಪ್ ಗಳಿರುತ್ತವೆ, ಆಪ್ ಗಳು ಹೆಚ್ಚಾದಷ್ಟೂ ಸ್ಮಾರ್ಟ್ ಫೋನ್ ಕಾರ್ಯಕ್ಷಮತೆ, ಭದ್ರತೆಗೂ ಕುತ್ತು ಹೆಚ್ಚು ಎಂದು ಟೆಕ್ ಎಆರ್ ಸಿ ವರದಿ ಹೇಳಿದೆ. 
ಟೆಕ್ಎಆರ್ ಸಿ ಡಿಜಿಟ್ ಇನ್ ಸೈಟ್ಸ್ ನ ಪ್ರಕಾರ, ಸ್ಮಾರ್ಟ್ ಫೋನ್ ನಲ್ಲಿ ಇನ್ಸ್ಟಾಲ್ ಆಗಿರುವ ಆಪ್ ಗಳ ಸರಾಸರಿ ಸಂಖ್ಯೆ 51. ಆದರೆ ಇದು 207 ನ್ನೂ ದಾಟಿರುವ ನಿದರ್ಶನಗಳಿದ್ದು, ಯೋಚನೆ ಮಾಡದೇ ಮನಸೋ ಇಚ್ಛೆ ಆಪ್ ಗಳನ್ನು ಡೌನ್ ಲೋಡ್ ಮಾಡಲಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ವರದಿ ಹೇಳುತ್ತಿದೆ. 
ಈ ರೀತಿ ಮನಸೋ ಇಚ್ಛೆ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡರೆ, ಸ್ಮಾರ್ಟ್ ಫೋನ್ ಕಾರ್ಯಕ್ಷಮತೆಗೂ ಸಮಸ್ಯೆಯಾಗುವುದಷ್ಟೇ ಅಲ್ಲದೇ ಭದ್ರತೆಗೂ ಕುತ್ತು ಬರಲಿದೆ ಎಂದು ವರದಿ ಎಚ್ಚರಿಸಿದೆ. ಭಾರತೀಯರ ಸ್ಮಾರ್ಟ್ ಫೋನ್ ಗಳಲ್ಲಿ 24 ಆಪ್ ಗಳಿದ್ದು ಅಗತ್ಯವಿದ್ದಷ್ಟೇ ಆಪ್ ಗಳನ್ನು ಡೌನ್ ಲೋಡ್ ಮಾಡಿ ಬಳಕೆ ಮಾಡುತ್ತಿದ್ದು, ಭಾರತೀಯರೇ ಉತ್ತಮ ಎನ್ನುತ್ತಿದೆ ವರದಿ. 
ಭಾರತದ ಸ್ಮಾರ್ಟ್ ಫೋನ್ ಬಳಕೆದಾರರ ಪೈಕಿ ಶೇ.38 ರಷ್ಟು ಮಂದಿ 6-10 ಆಪ್ ಗಳನ್ನು ದಿನ ನಿತ್ಯ ಬಳಕೆ ಮಾಡುತ್ತಾರೆ. ಈ ಪೈಕಿ ಅತಿ ಹೆಚ್ಚು ಬಳಕೆ ಮಾಡುವುದು ಸೋಶಿಯಲ್ ಮೀಡಿಯಾ ಆಪ್ ಗಳನ್ನೇ ಎಂದು ವರದಿ ಹೇಳಿದೆ.  ಶೇ.47 ರಷ್ಟು ಮಂದಿ ಆರ್ಥಿಕ ವಿಚಾರಕ್ಕೆ ಸಂಬಂಧಪಟ್ಟ ಆಪ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಜಾಗತಿಕವಾಗಿ ಗೇಮಿಂಗ್ ಹಾಗೂ ಮನರಂಜನಾ ಆಪ್ ಗಳು ಹೆಚ್ಚು ಡೌನ್ ಲೋಡ್ ಆಗುತ್ತಿದೆ ಎಂದು ವರದಿ ಮೂಲಕ ತಿಳಿದುಬಂದಿದೆ. 
SCROLL FOR NEXT