ವಿಜ್ಞಾನ-ತಂತ್ರಜ್ಞಾನ

ಕರಾವಳಿ ರಕ್ಷಣೆಗೆ ಡಿಆರ್ ಡಿಓನಿಂದ ಬಹು ಆಯಾಮಗಳ ವಿಮಾನ ಅಭಿವೃದ್ದಿ

Raghavendra Adiga
ಬೆಂಗಳೂರು: ಭಾರತ ವ್ಯಾಪ್ತಿಯ ಸಮುದ್ರ ತೀರದಲ್ಲಿ ಅನಾಮಿಕ ಹಡಗುಗಳ ನಿಗೂಢ ಸಂಚಾರವನ್ನು ಗುರುತಿಸಲು ಭಾರತೀಯ ಕರಾವಳಿ ರಕ್ಷಣಾ ಪಡೆಗಳಿಗೆ ನೆರವಾಗುವಂತೆ ಮಿಷನ್ ಮೆರಿಟೈಮ್ ಏರ್ಕ್ರಾಫ್ಟ್ (ಎಂಎಂಎಂಎ) ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) ಅಭಿವೃದ್ದಿಪಡಿಸುತ್ತಿದೆ. ಅನಧಿಕೃತವಾಗಿ ಒಳನುಸುಳುವವರನ್ನು ತಡೆಯುವುದು ಮಾತ್ರವಲ್ಲದೆ ಭಾರತದ ಭೂಪ್ರದೇಶದಲ್ಲಿನ ಸಮುದ್ರ ಭಾಗಗಳಲ್ಲಿ  ತೈಲ ಮತ್ತು ಇತರ ವಸ್ತುಗಳ ಸುರಿಯುವಿಕೆಯ ಮೂಲಕ  ಮಾಲಿನ್ಯಕ್ಕೆ ಕಾರಣವಾಗುವುದನ್ನು ಸಹ ಇದು ತಪ್ಪಿಸಲಿದೆ.
ಇದೊಂದು ವಿಶೇಷ ಸಾಮರ್ಥ್ಯದ ವಿಮಾನವಾಗಿದ್ದು "ವಿಶೇಷ ಕಣ್ಗಾವಲು ವಾಹವಾಗಿ ಕೆಲಸ ಮಾಡಲಿದೆ.ಎಂದು ಡಿಆರ್ ಡಿಓ ಅಧ್ಯಕ್ಷ ಎಸ್ ಕ್ರಿಸ್ಟೋಫರ್ ಹೇಳಿದರು. ಏರೋ ಇಂಡಿಯಾ 19 ರ ಭಾಗವಾಗಿ ಆಯೋಜಿಸಲಾದ ಮೊದಲ ವೆಬಿನಾರ್ (ವೆಬ್ ಸೆಮಿನಾರ್) ನಲ್ಲಿ ಅವರು 'ಭಾರತೀಯ ವಾಯು ಸಂಚಾರದ ಕಣ್ಗಾವಲು ವ್ಯವಸ್ಥೆಗಳ ಬೆಳವಣಿಗೆ' ಬಗ್ಗೆ ಮಾತನಾಡುತ್ತಿದ್ದರು "ಹಡಗುಗಳು ಹಾಗೂ ದೋಣಿ ಸಂಚಾರದ ಕುರಿತಂತೆ ಈ ಎಂಎಂಎಂಎ ಹೆಚ್ಚು ನಿಗಾ ವಹಿಸಲಿದೆ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಏರ್ಬಾರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್ಸ್ (ಎಡಬ್ಲ್ಯುಎಸಿಎಸ್)ನ ಮೊದಲ ಆವೃತ್ತಿಯನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರ್ಪಡೆ ಮಾಡಲಾಗಿದ್ದು ಇದಾದ ಬಳಿಕ  ಕಣ್ಗಾವಲು ವಿಮಾನಗಳ ಆರು ದೊಡ್ಡ ಆವೃತ್ತಿಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ.
SCROLL FOR NEXT