ವಿಜ್ಞಾನ-ತಂತ್ರಜ್ಞಾನ

ಈ ಡಿಎನ್ಎ ಪರೀಕ್ಷೆ ಮೂಲಕ ಮಕ್ಕಳಲ್ಲಿನ 193 ವಿಧದ ವಂಶವಾಹಿ ರೋಗ ಪತ್ತೆ ಸಾಧ್ಯ!

Srinivas Rao BV

ನ್ಯೂಯಾರ್ಕ್: ರಕ್ತಹೀನತೆ, ಅಪಸ್ಮಾರ ಮತ್ತು ಚಯಾಪಚಯ ಅಸ್ವಸ್ಥತೆಗಳು ಸೇರಿ ನವಜಾತ ಶಿಶುಗಳಲ್ಲಿರಬಹುದಾದ 193 ವಿಧದ ವಂಶವಾಹಿ ರೋಗಗಳನ್ನು ಪತ್ತೆ ಮಾಡುವುದಕ್ಕೆ ವಿಜ್ಞಾನಿಗಳು ಹೊಸ ಡಿಎನ್ಎ ಪರೀಕ್ಷೆಯನ್ನು ಕಂಡುಹಿಡಿದಿದ್ದಾರೆ.

ಸೆಮಾ 4 ನಟಾಲಿಸ್ ಎಂಬ ಹೊಸ ವಿಧದ ಡಿಎನ್ಎ ಪರೀಕ್ಷೆ ಮೂಲಕ ನವಜಾತ ಶಿಶುಗಳಲ್ಲಿ ಇರಬಹುದಾದ 193 ವಿಧದ ವಂಶವಾಹಿ ರೋಗವನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗಲಿದೆ.

ಶಿಶುವಿನ ಆರೋಗ್ಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪೋಷಕರಿಗೆ ಈ ಡಿಎನ್ಎ ಪರೀಕ್ಷೆ ಸಹಕಾರಿಯಾಗಲಿದೆ. ನೆಕ್ಸ್ಟ್ ಜನರೇಷನ್ ಟೆಕ್ನಾಲಜಿ ಸಹಕಾರದಿಂದ ನಡೆಸುವ ಈ ಪರೀಕ್ಷೆಗೆ 10 ವರ್ಷಗಳವರೆಗಿನ ಮಕ್ಕಳನ್ನು ಒಳಪಡಿಸಬಹುದಾಗಿದೆ.

ಈ ಡಿಎನ್ಎ ಪರೀಕ್ಷೆ ಮೂಲಕ ಶಿಶುಗಳಲ್ಲಿ ರೋಗ ಉಲ್ಬಣಿಸುವ ಮುನ್ನವೇ ಅವುಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಮುಂಜಾಗೃತಾ ಕ್ರಮವನ್ನು ಕೈಗೊಳ್ಳಬಹುದಾಗಿದೆ ಎಂದು ಸೆಮಾ4 ನ ಸಿಇಒ ಹಾಗೂ ಸ್ಥಾಪಕ ಎರಿಕ್ ಸ್ಕ್ಯಾಟ್ ತಿಳಿಸಿದ್ದಾರೆ.

SCROLL FOR NEXT