ವಿಜ್ಞಾನ-ತಂತ್ರಜ್ಞಾನ

ಭಾರತದಲ್ಲಿ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

Srinivasamurthy VN
ನವದೆಹಲಿ: ಶುಕ್ರವಾರ ನಡೆದ ದೇಶದ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.
ಭಾರತದ ಖ್ಯಾತ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಹಾಗೂ ಖ್ಯಾತ ಮೊಬೈಲ್ ತಂತ್ರಜ್ಞಾನ ಸಂಸ್ಥೆ ಹುವಾಯ್ ನಡೆಸಿದ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿದೆ. ಮೂಲಗಳ ಪ್ರಕಾರ ಗುರುಗ್ರಾಮದ ಮನೇಸರ್ ನಲ್ಲಿರುವ ಏರ್ ಟೆಲ್ ನೆಟ್ ವರ್ಕ್ ಕೇಂದ್ರದಲ್ಲಿ ನಡೆಸಿದ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆಯ ನಿರೀಕ್ಷೆಗೂ ಮೀರಿ ಯಶಸ್ವಿ.ಯಾಗಿದೆ.
ಈ ಬಗ್ಗೆ ಸ್ವತಃ ಭಾರ್ತಿ ಏರ್ ಟೆಲ್ ನೆಟ್ ವರ್ಕ್ಸ್ ನಿರ್ದೇಶಕರಾದ ಅಭಯ್ ಸಾವರ್ಗಾಂವ್ಕರ್ ಅವರು ಸಂತಸ ಹಂಚಿಕೊಂಡಿದ್ದು, 5ಜಿ ತಂತ್ರಜ್ಞಾನ ಸೇವೆ ಆರಂಭಕ್ಕೆ ನಾವು ಕಾರ್ಯಾರಂಭ ಮಾಡಿದ್ದು, ನಮ್ಮ ಸಹಭಾಗಿತ್ವ ಸಂಸ್ಥೆಗಳೊಂದಿಗೆ ಈ ಬಗ್ಗೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. 3.5ಗಿಗಾಹರ್ಟ್ಜ್ ಬ್ಯಾಂಡ್ ವಿಡ್ತ್ ಅನ್ನು ನಿನ್ನೆ ಪರೀಕ್ಷೆ ಮಾಡಲಾಗಿದ್ದು,. ಹಾಲಿ ಇರುವ 4ಜಿ ವೇಗವನ್ನೂ ಈ 5ಜಿ ತಂತ್ರಜ್ಞಾನ ಮೀರಿಸಲಿದೆ ಎಂದು ಹೇಳಲಾಗುತ್ತಿದೆ. 
ಇನ್ನು ಏರ್ಟೆಲ್ ನಂತೆಯೇ ವೋಡಾಫೋನ್ ಹಾಗೂ ಇತರೆ ಸಂಸ್ಥೆಗಳೂ ಕೂಡ 5ಜಿ ತಂತ್ರಜ್ಞಾನ ಸೇವೆ ಅರಂಭಕ್ಕೆ ತುದಿಗಾಲಲ್ಲಿ ನಿಂತಿವೆ.
SCROLL FOR NEXT