ವಿಜ್ಞಾನ-ತಂತ್ರಜ್ಞಾನ

ಬಿಡುಗಡೆಗೂ ಮುನ್ನವೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ರೋಮೋ ಲೀಕ್

Srinivas Rao BV
ಸಿಯೋಲ್: ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ರೋಮೋ ಬಿಡುಗಡೆಗೂ ಮುನ್ನವೇ ಲೀಕ್ ಆಗಿದೆ. 
ಸ್ಯಾಮ್ ಸಂಗ್ S9 ಪ್ರೋಮೋ ಮುಂದಿನ ವಾರ 2018 ರ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಆಕಸ್ಮಿಕವಾಗಿ ಪ್ರೋಮೋ ಲೀಕ್ ಆಗಿದೆ. ತಕ್ಷಣವೇ ಲೀಕ್ ಆಗಿದ್ದ ವಿಡಿಯೋವನ್ನು ತೆಗೆದುಹಾಕಲಾಗಿದೆ. 
ಇದಕ್ಕೂ ಮುನ್ನ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಫೋಟೊಗಳು ಬಿಡುಗಡೆಯಾಗಿದ್ದವು. ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಬೆಲೆ $890 ಯಷ್ಟಾಗಿರಲಿದೆ ಎಂದು ಅಂದಾಜಿಸಲಾಗಿದೆ. 
SCROLL FOR NEXT