ವಿಜ್ಞಾನ-ತಂತ್ರಜ್ಞಾನ

ಇಂಟರ್ ನೆಟ್ ವಿಷಯದಲ್ಲಿ ಗ್ರಾಮೀಣ ಭಾರತ ಇನ್ನೂ ಹಿಂದಿದೆ: ಡೆಲೊಯಿಟ್ ಇಂಡಿಯಾ

Srinivas Rao BV
ನವದೆಹಲಿ: ಗ್ರಾಮೀಣ ಭಾರತದಲ್ಲಿ ಕೇವಲ ಶೇ.17 ರಷ್ಟು ಇಂಟರ್ ನೆಟ್ ಬಳಕೆಯಿದ್ದು, ಅಂತರ್ಜಾಲ ಬಳಕೆಯಲ್ಲಿ ಗ್ರಾಮೀಣ ಭಾರತ ಇನ್ನೂ ಹಿಂದಿದೆ ಎಂದು ಡೆಲೋಯಿಟ್ ಇಂಡಿಯಾ ಹೇಳಿದೆ. 
ಭಾರತದಲ್ಲಿ ಸುಮಾರು 750 ಮಿಲಿಯನ್ ಬಳಕೆದಾರರಿಗೆ ನಿಸ್ತಂತು ಅಂತರ್ಜಾಲದಿಂದ ಇಂಟರ್ ನೆಟ್ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬ್ಯಾಂಡ್ ವಿಡ್ತ್ ಅಗತ್ಯವಿರುವವರಿಗೆ ಬ್ರಾಡ್ ಬ್ಯಾಂಡ್ ಸೇವೆಗಳ ಬೇಡಿಕೆ ಕಡಿಮೆಯಾಗಲಿವೆ ಎಂದು ಡೆಲೋಯಿಟ್ ಇಂಡಿಯಾ ವರದಿ ಹೇಳಿದೆ. 
ಎಲ್ ಟಿಇ, ಎಲ್ ಟಿಇ-ಎ, ಎಲ್ ಟಿಇ-ಎ ಪ್ರೋ ಹಾಗೂ 5 ಜಿ ತಂತ್ರಜ್ಞಾನಗಳು ಮುಂದಿನ ದಿನಗಳಲ್ಲಿ ನಿಸ್ತಂತು ಇಂಟರ್ ನೆಟ್ ನಲ್ಲಿ ಪ್ರಾಮುಖ್ಯತೆ ಪಡೆಯಲಿದೆ. ಡಿಜಿಟಲ್ ಸೇವೆಗಳಿಗೆ ಮೊಬೈಲ್ ಪ್ರಾಥಮಿಕವಾಗಿರಲಿದೆ ಎಂದು ಡೆಲೋಯಿಟ್ ಇಂಡಿಯಾ ಹೇಳಿದೆ. 
ಇನ್ನು 2023 ರ ವೇಳೆಗೆ ಸ್ಮಾರ್ಟ್ ಫೋನ್ ಗಳಲ್ಲಿ ಸೆನ್ಸಾರ್ ಗಳ ವ್ಯಾಪ್ತಿಯೂ ಹೆಚ್ಚಾಗಲಿದ್ದು, ಈಗಿರುವ ಸೆನ್ಸಾರ್ ಗಳನ್ನು ಅಪ್ ಗ್ರೇಡ್ ಮಾಡಲಾಗುತ್ತದೆ ಎಂದು  ಡೆಲೋಯಿಟ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.
SCROLL FOR NEXT