ಸ್ಯಾನ್ ಫ್ರಾನ್ಸಿಸ್ಕೊ: ಡಿಜಿಟಲ್ ವಿಭಾಗದಲ್ಲಿ ಸುದ್ದಿ ಮನೆಗಳನ್ನು ಮತ್ತಷ್ಟು ಸಬಲೀಕರಣಗೊಳಿಸಲು ಗೂಗಲ್ ಸಂಸ್ಥೆ ಮುಂದಿನ ಮೂರು ವರ್ಷಗಳಿಗೆ 300 ಮಿಲಿಯನ್ ಡಾಲರ್ ಮೀಸಲಿಟ್ಟಿದೆ.
ಗೂಗಲ್ ನ್ಯೂಸ್ ಇನಿಷಿಯೆಟೀವ್ (ಜಿಐಎನ್) ನ ಭಾಗವಾಗಿ ಗೂಗಲ್ 300 ಮಿಲಿಯನ್ ಡಾಲರ್ ನಷ್ಟು ಹಣವನ್ನು ಮೀಸಲಿಟ್ಟಿದ್ದು, ಮಾಧ್ಯಮಗಳಿಗೆ ಹೊಸ ಉದ್ಯಮದ ಮಾದಲ್ ಹಾಗೂ ಹೊಸ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ. ಪತ್ರಿಕೋದ್ಯಮದ ಬ್ಯುಸಿನೆಸ್ ಮಾಡಲ್ ಮುಂದಿನ ದಿನಗಳಲ್ಲಿ ಅಗಾಧವಾದ ಬದಲಾವಣೆಗೆ ತೆರೆದುಕೊಳ್ಳಲಿದ್ದು, ತಂತ್ರಜ್ಞಾನ ಎಲ್ಲಾ ಸುದ್ದಿ ಸಂಸ್ಥೆಗಳಿಗೂ ಸವಾಲಿನ ಸಂಗತಿಯಾಗಲಿದೆ ಈ ಹಿನ್ನೆಲೆಯಲ್ಲಿ ಗೂಗಲ್ ಸುದ್ದಿಮನೆಗಳ ಸಬಲೀಕರಣಕ್ಕಾಗಿ 300 ಮಿಲಿಯನ್ ಡಾಲರ್ ಮೀಸಲಿರಿಸಿದೆ ಎಂದು ಗೂಗಲ್ ನ ಬ್ಯುಸಿನೆಸ್ ವಿಭಾಗದ ಮುಖ್ಯ ಅಧಿಕಾರಿ ಫಿಲಿಪ್ ಷಿಂಡ್ಲರ್ ತಿಳಿಸಿದ್ದಾರೆ.