‘ದಿಶಾಂಕ್‌’ ಆ್ಯಪ್‌ 
ವಿಜ್ಞಾನ-ತಂತ್ರಜ್ಞಾನ

ಆಸ್ತಿ ಖರೀದಿಸುವವರ ನೆರವಿಗಾಗಿ ಭೂದಾಖಲೆಗಳ ಮಾಹಿತಿ ಒಳಗೊಂಡ 'ದಿಶಾಂಕ್‌’ ಆ್ಯಪ್‌' ಬಿಡುಗಡೆ

ರಾಜ್ಯದ ಯಾವುದೇ ಭಾಗದಲ್ಲಿ ಭೂಮಿ ಖರೀದಿಸಲು, ಅಥವಾ ಯಾವುದೇ ಆಸ್ತಿ ವಿಲೇವಾರಿ, ಸರ್ವೆ ನಂಬರ್ ತಿಳಿದುಕೊಳ್ಳಲು ಇನ್ನು ಹೆಚ್ಚು ಶ್ರಮ ಪಡಬೇಕಾಗಿಲ್ಲ

ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ಭೂಮಿ ಖರೀದಿಸಲು, ಅಥವಾ ಯಾವುದೇ ಆಸ್ತಿ ವಿಲೇವಾರಿ, ಸರ್ವೆ ನಂಬರ್ ತಿಳಿದುಕೊಳ್ಳಲು ಇನ್ನು ಹೆಚ್ಚು ಶ್ರಮ ಪಡಬೇಕಾಗಿಲ್ಲ. ಕಂದಾಯ ಇಲಾಖೆ ಹೊರತಂದಿರುವ  ‘ದಿಶಾಂಕ್‌’ ಆ್ಯಪ್‌ ನಲ್ಲಿ ಈ ಎಲ್ಲಾ ಸಂದೇಹಗಳಿಗೆ ಪರಿಹಾರ ಸಿಗಲಿದೆ.
‘ದಿಶಾಂಕ್‌’ ಆ್ಯಪ್‌ ನಲ್ಲಿ ರಾಜ್ಯದಾದ್ಯಂತದ ಆಸ್ತಿಗಳ ವಿವರಗ ಹಾಕಲಾಗಿದ್ದು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಾಗುವ ಈ ಆ್ಯಪ್‌ ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರವಾಗಿದೆ.
ಮೂರು ವರ್ಷಗಳ ಪರಿಶ್ರಮದಿಂದ ಈ ಆ್ಯಪ್‌ ತಯಾರಾಗಿದ್ದು ಇಲಾಖೆಯ ದಾಖಲೆಗಲಲ್ಲಿನ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ಇದನ್ನು ರಚಿಸಲಾಗಿದೆ. 
ಭೂದಾಖಲೆ ಮತ್ತು ಸರ್ವೆ ಇಲಾಖೆಯ ಆಯುಕ್ತ ಮುನೀಶ್‌ ಮೌದ್ಗಿಲ್‌ ಮಾತನಾಡಿ ಆ್ಯಪ್‌ ನಿಂದಾಗಿ 1960ರ ಭೂ ನಕಾಶೆ ದೊರಕಲಿದೆ. ಯಾವುದೇ ಆಸ್ತಿಯ ಮೂಲ ವಿವರಗಳನ್ನು ತಿಳಿಯಲು ಇದರಿಂದ ಅನುಕೂಲವಾಗಲಿದೆ ಎಂದರು.
ಆದರೆ ಈ ಮಾಹಿತಿಯು ಕಾನೂನು ಬದ್ದವಾಗಿದೆ ಎನ್ನಲಾಗುವುದಿಲ್ಲ. ಆ್ಯಪ್‌ ನಲ್ಲಿ ಕಾಣಿಸುವ ನಕಾಶೆ ಕೇವಲ ಸಾಂಕೇತಿಕವಾಗಿದ್ದು ಸರ್ವೆ ನಂಬರ್‌ನ ಗಡಿರೇಖೆಗಳ ಮಾಹಿತಿ ಇದರಲ್ಲಿ ಲಭ್ಯ. ಮೊದಲಿಗೆ ಮೊಬೈಲ್ ನಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಲೊಕೇಷನ್ ಅನ್ನು ಅಪ್ ಡೇಟ್ ಮಾಡಿಕೊಳ್ಳಬೇಕು. ಆಗ ನಿಮ್ಮ ನಿಗದಿತ ಸ್ಥಳ ಯಾವ ಸರ್ವೆ ನಂಬರ್ ಒಳಗೆ ಬರಲಿದೆ ಎನ್ನುವುದನ್ನು ತಿಳಿಸುತ್ತದೆ. ಅಲ್ಲದೆ ಸರ್ವೆ ನಂಬರ್ ನಮೂದಿಸಿ ನಿಗದಿತ ಸ್ಥಳದ ಮಾಹಿತಿ ಪಡೆಯಬಹುದು.
ಆಸ್ತಿ ಖರೀದಿಗೆ ಆಸಕ್ತಿ ಇರುವವರು ಈ ಆ್ಯಪ್‌ ಮೂಲಕ ತಾವು ಖರೀದಿಸಲು ಹೊರಡುವ ಜಾಗದ ವಿವರ ತಿಳಿದುಕೊಳ್ಳಲು ಸಾಧ್ಯ. ಬಿಬಿಎಂಪಿ, ಬಿಎಂಆರ್‌ಡಿಎ ಆ್ಯಪ್‌  ಗಳಿಗಿಂತ  ದಿನಾಂಕ್ ಅತ್ಯುತ್ತಮ ಗುಣಲಕ್ಷಣ ಹೊಂದಿದೆ.ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಅಭಿವೃದ್ದಿಪಡಿಸಿ ಒಂದೇ ಆ್ಯಪ್‌ನಲ್ಲಿ  ಸಾರ್ವಜನಿಕರಿಗೆ ಅಗತ್ಯವಾದ ಎಲ್ಲಾ ಭೂದಾಖಲೆಗಳಿಗೆ ಸಂಬಂಧಿಸಿ ಮಾಹಿತಿ ಒದಗಿಸಲು ಇಲಾಖೆ ತೀರ್ಮಾನಿಸಿದೆ.
ದಿಶಾಂಕ್ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ https://play.google.com/store/apps/details?id=com.ksrsac.sslr

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT