ವಿಜ್ಞಾನ-ತಂತ್ರಜ್ಞಾನ

ಬಳಕೆದಾರರ ಡಾಟಾ ಕಳ್ಳತನ: 200 ಆಪ್ ಗಳನ್ನು ಸ್ಥಗಿತಗೊಳಿಸಿದ ಫೇಸ್ ಬುಕ್

Srinivas Rao BV
ನವದೆಹಲಿ: ಫೇಸ್ ಬುಕ್ ನೊಂದಿಗೆ ಸಂಪರ್ಕ ಹೊಂದಿದ್ದ ಕೆಲವು ಆಪ್ ಗಳು ಬಳಕೆದಾರರ ಮಾಹಿತಿಯನ್ನು ಕಳ್ಳತನ ಮಾಡುತ್ತಿದ್ದ ಆರೋಪ ಕೇಳಿಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಸಂಸ್ಥೆ ಅಂತಹ ಆಪ್ ಗಳ ವಿರುದ್ಧ ಸಮರ ಸಾರಿದ್ದು, 200 ಆಪ್ ಗಳನ್ನು ಸ್ಥಗಿತಗೊಳಿಸಿದೆ.
ಬಳಕೆದಾರರ ಮಾಹಿತಿಯನ್ನು ಹೊಂದಿದ್ದ ಆಪ್ ಗಳ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಫೇಸ್ ಬು ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಭರವಸೆ ನೀಡಿದ್ದರು.  ಆಪ್ ಗಳ ಬಗೆಗಿನ ತನಿಖೆ ಚುರುಕುಗೊಂಡಿದ್ದು ಬಳಕೆದಾರರ ಮಾಹಿತಿ ಹೊಂದಿದ್ದ 200 ಆಪ್ ಗಳನ್ನು ಗುರುತಿಸಿ ಸ್ಥಗಿತಗೊಳಿಸಲಾಗಿದೆ ಎಂದು ಫೇಸ್ ಬುಕ್ ತಿಳಿಸಿದೆ. 
ಕೆಲವು ಸಾವಿರ ಆಪ್ ಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 200 ಆಪ್ ಗಳು ಫೇಸ್ ಬುಕ್ ಬಳಕೆದಾರರ ಮಾಹಿತಿ ಹೊಂದಿದ್ದವು. ಈ ಆಪ್ ಗಳು ಬಳಕೆದಾರರ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡಿವೆಯೇ ಎಂಬುದರ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ. 
SCROLL FOR NEXT