ವಿಜ್ಞಾನ-ತಂತ್ರಜ್ಞಾನ

2023ರ ಶುಕ್ರನೆಡೆಗೆ ಉಪಗ್ರಹ ಕಳುಹಿಸುವ ಯೋಜನೆ: ವಿದೇಶಿ ಪ್ರಯೋಗಗಳಿಗೆ ಇಸ್ರೊ ಆಹ್ವಾನ

Sumana Upadhyaya

ಬೆಂಗಳೂರು: 2023ಕ್ಕೆ ಶುಕ್ರನೆಡೆಗೆ ಉಪಗ್ರಹ ಕಳುಹಿಸುವ ಯೋಜನೆಗೆ ಇಸ್ರೋ ತನ್ನ ಮೊದಲ ಹೆಜ್ಜೆಯಿಟ್ಟಿದ್ದು ವೈಜ್ಞಾನಿಕ ಸಿಡಿತಲೆಯನ್ನು ಹೊತ್ತೊಯ್ಯುವ ಪ್ರಯೋಗಕ್ಕೆ ಮುಂದಾಗಿದೆ. ಇದಕ್ಕೆ ಅವಕಾಶಗಳ ಘೋಷಣೆ(ಎಒ)ಯನ್ನು ಇಸ್ರೊ ಹೊರಡಿಸಿದೆ.

ಶುಕ್ರ ಗ್ರಹದ ಮೇಲಿನ ಅಧ್ಯಯನಕ್ಕೆ ಅಂತರಿಕ್ಷ ಆಧಾರಿತ ಅವಕಾಶಗಳ ಘೋಷಣೆ ಇದಾಗಿದ್ದು, ಹಲವು ಅಂತರಿಕ್ಷ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ಅಂತಾರಾಷ್ಟ್ರೀಯ ವಿಜ್ಞಾನಿಗಳನ್ನು ಮುಕ್ತವಾಗಿ ಆಹ್ವಾನಿಸಿದೆ.

ಈ ಕುರಿತು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಇಸ್ರೊ, ಶುಕ್ರ ಗ್ರಹದ ನಿರ್ದಿಷ್ಟ ಕ್ಷೇತ್ರಗಳ ವಿಜ್ಞಾನದ ಆಸಕ್ತಿ ವಿಷಯಗಳನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ಆಧಾರಿತ ಪ್ರಯೋಗಗಳಿಗೆ ಅಂತರರಾಷ್ಟ್ರೀಯ ವೈಜ್ಞಾನಿಕ ಸಮುದಾಯದಿಂದ ಪ್ರಸ್ತಾವನೆಗಳನ್ನು ಕೋರಲಾಗಿದೆ. ಇಸ್ರೋದ ಶುಕ್ರ ಗ್ರಹದ ಮೇಲಿನ ಕಾರ್ಯಾಚರಣೆಗೆ ಅವಕಾಶಗಳ ಘೋಷಣೆ ಆಧಾರಿತ ಪ್ರಯೋಗಗಳು ಹೆಚ್ಚು ನೆರವಾಗಲಿವೆ ಎಂದರು.

ಪ್ರಸ್ತುತ ಗ್ರಹಗಳ ಪರಿಶೋಧನೆ ಅಧ್ಯಯನಗಳಲ್ಲಿ, ಬಾಹ್ಯಾಕಾಶಕ್ಕೆ ವಿಜ್ಞಾನ ಸಾಧನಗಳ ಅಭಿವೃದ್ಧಿ, ಮತ್ತು ಬಾಹ್ಯಾಕಾಶ ಯೋಗ್ಯವಾದ ಪ್ರಯೋಗಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆಗಾರರು ಸಿದ್ಧವಾಗಿರುತ್ತಾರೆ. ಪ್ರಸ್ತಾವನೆಗಳನ್ನು ಡಿಸೆಂಬರ್ 20ರ ಮಧ್ಯರಾತ್ರಿಯವರೆಗೆ ಸ್ವೀಕರಿಸಲಾಗುತ್ತದೆ ಎಂದು ಇಸ್ರೋ ಹೇಳಿದೆ.

ಶುಕ್ರ ಗ್ರಹದಲ್ಲಿ  ವಿಶಾಲ ಸಂಶೋಧನಾ ವಿಷಯಗಳು, ಗ್ರಹದ ಮೇಲ್ಮೈ, ಉಪ ಮೇಲ್ಮೈ ವೈಶಿಷ್ಟ್ಯಗಳು ಮತ್ತು ಮರು-ಮೇಲ್ಮುಖ ಪ್ರಕ್ರಿಯೆಗಳ ಸಂಶೋಧನೆ ಮತ್ತು ಅದರ ವಾತಾವರಣದ ರಸಾಯನಶಾಸ್ತ್ರ, ಚಲನಶಾಸ್ತ್ರ ಮತ್ತು ಸಂಯೋಜನೆ ವ್ಯತ್ಯಾಸಗಳು ಹಾಗೂ ಸೌರ ವಿಕಿರಣ, ಸೌರ ಮಾರುತದೊಂದಿಗಿನ ಪರಸ್ಪರ ಕ್ರಿಯೆಗಳನ್ನು ಗುರುತಿಸಲಾಗಿದೆ ಎಂದು ಇಸ್ರೋ ಹೇಳಿದೆ.

2023ರಲ್ಲಿ ಶುಕ್ರನ ಕಡೆಗೆ ಕಳುಹಿಸುವ ಉದ್ದೇಶಿತ ಉಪಗ್ರಹ 100 ಕೆಜಿ ತೂಕವನ್ನು ಹೊಂದಿದ್ದು 500 ವ್ಯಾಟ್ ಇಂಧನ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅದು ಶುಕ್ರನ ಸುತ್ತ 500 ಕಿಲೋ ಮೀಟರ್ ನಿಂದ 60 ಸಾವಿರ ಕಿಲೋ ಮೀಟರ್ ವರೆಗೆ ಸುತ್ತುವ ಸಾಧ್ಯತೆಯಿದೆ.

SCROLL FOR NEXT