ವಿಜ್ಞಾನ-ತಂತ್ರಜ್ಞಾನ

ಕೀ ಪ್ಯಾಡ್ ಜಿಯೋ ಫೋನ್ ನಲ್ಲೂ ವಾಟ್ಸ್ ಆಪ್ ಸೌಲಭ್ಯ: ಡೌನ್ ಲೋಡ್ ಮಾಡುವುದು ಹೇಗೆ ಗೊತ್ತೇ?

Srinivas Rao BV
ಟಚ್ ಸ್ಕ್ರೀನ್ ಇಲ್ಲದ ಜಿಯೋ ಫೋನ್ ಬಳಕೆದಾರರಿಗೂ ಶೀಘ್ರವೇ ವಾಟ್ಸ್ ಆಪ್ ಸೌಲಭ್ಯ  ದೊರೆಯಲಿದೆ. 
ಇದೇ ಮೊದಲ ಬಾರಿಗೆ ಜಿಯೋ ಕೀ ಪ್ಯಾಡ್ ಮೊಬೈಲ್ ನಲ್ಲಿಯೂ ವಾಟ್ಸ್ ಆಪ್ ಬಳಕೆ ಮಾಡಬಹುದಾಗಿದ್ದು, ಇನ್ನು 10 ದಿನಗಳಲ್ಲಿ ಈ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.  ಇದಕ್ಕಾಗಿ ಜಿಯೋ ಗ್ರಾಹಕರು ಮಾಡಬೇಕಾಗಿರುವುದು ಇಷ್ಟೇ. ಅದೇನೇಂದರೆ ಮೊಬೈಲ್ ನಂಬರ್ ನ್ನು ದೃಢೀಕರಿಸಿ ವಾಟ್ಸ್ ಆಪ್ ನಲ್ಲಿ ಸಂದೇಶ ಕಳಿಸಬಹುದಾಗಿದೆ. 
ವಿಶ್ವಾದ್ಯಂತ ಎಲ್ಲಾ ಜಿಯೋ ಮೊಬೈಲ್ ಹ್ಯಾಂಡ್ ಸೆಟ್ ಗಳಲ್ಲಿ ವಾಟ್ಸ್ ಆಪ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ, ಇದಕ್ಕಾಗಿ ಜಿಯೋ ಸಂಸ್ಥೆ ಫೇಸ್ ಬುಕ್ ಹಾಗೂ ವಾಟ್ಸ್ ಆಪ್ ಗೆ ಧನ್ಯವಾದ ತಿಳಿಸುತ್ತದೆ ಎಂದು ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ನ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ. 
ಹಲವು ಸುತ್ತಿನ ಪ್ರಯೋಗಗಳ ನಂತರ ಇದೇ ಮೊದಲ ಬಾರಿಗೆ ಎಲ್ಲಾ ಜಿಯೋ ಮೊಬೈಲ್ ಗಳಲ್ಲಿಯೂ ವಾಟ್ಸ್ ಆಪ್ ಸೇವೆ ಲಬ್ಯವಿರಲಿದೆ ಎಂದು ರಿಲಾಯನ್ಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿಮ ಮಾಹಿತಿಗಾಗಿ ಜಿಯೋ ವಾಟ್ಸ್ ಹೆಲ್ಪ್ ಲೈನ್ 1991 ನಂಬರ್ ನ್ನು ಸಂಪರ್ಕಿಸಬಹುದಾಗಿದೆ. 
SCROLL FOR NEXT