ಇಸ್ರೋ ಮತ್ತೊಂದು ವಿಕ್ರಮ: ಬ್ರಿಟನ್‌ನ 2 ಖಾಸಗಿ ಉಪಗ್ರಹ ಉಡಾವಣೆ ಯಶಸ್ವಿ
ಶ್ರೀಹರಿಕೋಟಾ(ಆಂಧ್ರ ಪ್ರದೇಶ): ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಇಸ್ರೋ ಬ್ರಿಟನ್‌ನ 2 ಖಾಸಗಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಈ ಮೂಲಕ ಇಸ್ರೋ ಇದೇ ಪ್ರಥಮ ಬಾರಿಗೆ ರಾತ್ರಿ ವೇಳೆ ಉಪಗ್ರಹ ಉಡಾವಣೆ ಮಾಡಿದ್ದು ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ.
ನೋವಾಸರ್ ಹಾಗೂ ಎಸ್1-4ಗಳನ್ನು ಪಿಎಸ್ಎಲ್‌ವಿ-ಸಿ42 ಮೂಲಕ ಇಸ್ರೋ ಭಾನುವಾರ ರಾತ್ರಿ 10.08ಕ್ಕೆ ಸರಿಯಾಗಿ ಉಡಾವಣೆ ಮಾಡಿದೆ.
ಬ್ರಿಟನ್‌ನ ಸರ್ರೆ ಸೆಟಲೈಟ್ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಗೆ ಸೇರಿರುವ ಈ ಎರಡೂ ಉಪಗ್ರಹಗಳು ಪರಿಸರ ನಕಾಶ ರಚನೆ, ನೈಸರ್ಗಿಕ ವಿಕೋಪಗಳ ಅಧ್ಯಯನ ಸೇರಿ ವಿವಿಧ ಕಾರ್ಯಗಳಲ್ಲಿ ಬಳಕೆಯಾಗಲಿದೆ.
ನೋವಾಸಾರ್ 445 ಕೆಜಿ ತೂಕದ್ದಾದರೆ, ಎಸ್1-4 444 ಕೆಜಿ. ತೂಕ ಹೊಂದಿದೆ. ಇನ್ನು ಈ ಉಪಗ್ರಹವನ್ನು ಹೊತ್ತೊಯ್ದ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ) ಗೆ ಇದು 44ನೇ ಪ್ರಯಾಣವಾಗಿದೆ.
ಬ್ರಿಟನ್ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
"ನಮ್ಮ ಬಾಹ್ಯಾಕಾಶ ವಿಜ್ಞಾನಿಗಳಿಗೆ ಅಭಿನಂದನೆಗಳು, ಇಸ್ರೋ ಪಿಎಸ್ಎಲ್‌ವಿ ಉಡಾವಣಾ ವಾಹನ ಎರಡು ಯುಕೆ ಉಪಗ್ರಹಗಳನ್ನು ಕಕ್ಷೆ ಸೇರಿಸುವಲ್ಲಿ ಯಶಸ್ಬಿಯಾಗಿದೆ./ಬಾಹ್ಯಾಕಾಶ ಕ್ಷೇತ್ರದ ಸ್ಪರ್ಧಾತ್ಮಕ ವ್ಯವಹಾರದಲ್ಲಿ ಬಾರತ ತನ್ನ ವಿಕ್ರಮವನ್ನು ಸಾಬೀತುಪಡಿಸಿದೆ" ಪ್ರಧಾನಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos