ವಿಜ್ಞಾನ-ತಂತ್ರಜ್ಞಾನ

'ಬಾಹುಬಲಿ' ವೀಕ್ಷಣೆಗೆ 7,134 ಜನರಿಂದ ನೋಂದಣಿ!

Srinivas Rao BV
ಚೆನ್ನೈ: ಚಂದ್ರಯಾನ-2 ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ಯಲಿರುವ ರಾಕೆಟ್ ಬಾಹುಬಲಿ ಗಗನಕ್ಕೆ ಚಿಮ್ಮುವುದಕ್ಕೆ ಜುಲೈ 15 ರಂದು ದಿನಾಂಕ ನಿಗದಿಯಾಗಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. 
ಭಾರತ ಬಾಹ್ಯಾಕಾಶ ಸಂಸ್ಥೆಯ ಈ ಸಾಧನೆಯನ್ನು ವೀಕ್ಷಿಸಲು ಈ ವರೆಗೂ 7,134 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಇಸ್ರೋ ಸಂಸ್ಥೆ ರಾಕೆಟ್ ಉಡಾವಣೆಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿತ್ತು, ಇದಕ್ಕಾಗಿ ಗ್ಯಾಲರಿಯನ್ನೂ ನಿರ್ಮಾಣ ಮಾಡಲಾಗಿದ್ದು ಸುಮಾರು 10,000 ಜನರನ್ನೊಳಗೊಳ್ಳುವ ಸಾಮರ್ಥ್ಯ ಹೊಂದಿದೆ. 
ಜು.15 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಬಾಹುಬಲಿ ಉಡಾವಣೆಯಾಗಲಿದೆ.
SCROLL FOR NEXT