ವಿಜ್ಞಾನ-ತಂತ್ರಜ್ಞಾನ

ಏಷ್ಯಾದಲ್ಲೇ ಮೊದಲು: ಫ್ಲಿಪ್‌ಕಾರ್ಟ್‌ನಲ್ಲಿ ರೋಬೋಗಳ ಕರಾಮತ್ತು, ಸಖತ್ ಫಾಸ್ಟ್ ವರ್ಕ್!

Vishwanath S
ಬೆಂಗಳೂರು: ದೇಶದ ದೊಡ್ಡ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ ವಸ್ತುಗಳ ಪ್ಯಾಕಿಂಗ್ ಸೇರಿದಂತೆ ಇನ್ನಿತರ ಕಾರ್ಯಗಳಿಗೆ 100 ರೋಬೋಗಳನ್ನು ಬಳಕೆ ಮಾಡುತ್ತಿದ್ದು ಇದು ಏಷ್ಯಾದಲ್ಲೇ ಮೊದಲು ಎನ್ನಲಾಗಿದೆ.
ಬೆಂಗಳೂರಿನಲ್ಲಿರುವ ತನ್ನ ಗೋದಾಮಿನಲ್ಲಿ ಸರಕುಗಳ ಪ್ಯಾಕಿಂಗ್ ಸೇರಿದಂತೆ ಇನ್ನಿತರ ಕಾರ್ಯಗಳಿಗೆ 100ಕ್ಕೂ ಹೆಚ್ಚು ಸ್ವಯಂಚಾಲಿತ ರೋಬೋಗಳು ಪ್ರತಿ ಪ್ಯಾಕೇಜ್ ನಲ್ಲಿ ನೀಡಿರುವ ಎನ್ ಕೋಡೆಡ್ ಮಾಹಿತಿಗಳನ್ನು ಗುರುತಿಸಿ, ಗ್ರಾಹಕರ ಪಿನ್ ಕೋಡ್ ಆಧಾರದಲ್ಲಿ ವಿಂಗಡಿಸುತ್ತವೆ. ಇದರಿಂದ ಗ್ರಾಹಕರಿಗೆ ತ್ವರಿತವಾಗಿ ಸರಕುಗಳನ್ನು ಪೂರೈಸಲು ಅನುಕೂಲವಾಗಲಿದೆ.
ಈ ರೋಬೋಗಳು ಕೇವಲ 1 ಗಂಟೆಯಲ್ಲೇ 4500 ಶಿಪ್‍ಮೆಂಟ್‍ಗಳನ್ನು ವಿಂಗಡಿಸುತ್ತವೆ. ಇವುಗಳ ಕಾರ್ಯಕ್ಷಮತೆ ಶೇಖಡ 99.9ರಷ್ಟು ನಿಖರವಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ತಂತ್ರಜ್ಞಾ ಆಧಾರಿತ ಕಂಪನಿಯಾಗಿರುವ ಫ್ಲಿಪ್‌ಕಾರ್ಟ್‌ ನಿರಂತರವಾಗಿ ತನ್ನ ಪೂರೈಕೆ ಜಾಲದಲ್ಲಿ ಯಾಂತ್ರೀಕರಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಈ ಎಜಿವಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಉಪಕ್ರಮಗಳನ್ನು ಕೈಗೊಂಡಿರುವ ಕಂಪನಿ ಎಂಬ ಹೆಗ್ಗಳಿಕೆಗೆ ಫ್ಲಿಪ್‌ಕಾರ್ಟ್‌ ಪಾತ್ರವಾಗಿದೆ. 
SCROLL FOR NEXT