ವಿಜ್ಞಾನ-ತಂತ್ರಜ್ಞಾನ

ಗೂಗಲ್ ನಿಂದ ಚೀನಾ ಸೇನೆಗೆ ಸಹಾಯ: ಆತಂಕಗೊಂಡ ಅಮೆರಿಕ!

Srinivas Rao BV
ಚೀನಾ ಅಮೆರಿಕಾಗೆ ಹಲವು ವಿಷಯಗಳಲ್ಲಿ ತಲೆನೋವಾಗಿ ಪರಿಣಮಿಸಿದೆ. ಈಗ ಚೀನಾ ವಿಷಯದಲ್ಲಿ ವಿಶ್ವದ ದೊಡ್ಡಣ್ಣನಿಗೆ ತಲೆ ನೋವಾಗಿ ಪರಿಣಮಿಸಿರುವುದು ಗೂಗಲ್! 
ಅಚ್ಚರಿಯಾದರೂ ಇದನ್ನು ನಂಬಲೇಬೇಕು. ಚೀನಾದಲ್ಲಿ ಗೂಗಲ್ ನ ಕೃತಕ ಬುದ್ಧಿಮತ್ತೆ ಕಾರ್ಯನಿರ್ವಹಣೆ ಅಲ್ಲಿನ ಸೇನಾಗೆ ಸಹಕಾರಿಯಾಗುತ್ತಿದೆ ಎಂಬುದು ಅಮೆರಿಕಾದ ಹೊಸ ಆತಂಕಕ್ಕೆ ಕಾರಣವಾಗಿರುವ ಅಂಶ. 
ಈ ಹಿನ್ನೆಲೆಯಲ್ಲಿ ಅಮೆರಿಕಾದ ಸಿಬ್ಬಂದಿಗಳ ಜಂಟಿ ಮುಖ್ಯಸ್ಥರಾಗಿರುವ ಜೋಸೆಫ್ ಡನ್ಫೋರ್ಡ್ ಈ ಬಗ್ಗೆ ಮಾತನಾಡಿದ್ದು, ಗೂಗಲ್ ಪರೋಕ್ಷವಾಗಿ ಚೀನಾ ಸೇನೆಗೆ ಸಹಾಯ ಮಾಡುತ್ತಿದೆ. 2017 ರಲ್ಲಿ ಬೀಜಿಂಗ್ ನಲ್ಲಿ ಪ್ರಾರಂಭವಾದ ಗೂಗಲ್ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ ಅಮೆರಿಕಾದ ಆತಂಕಕ್ಕೆ ಕಾರಣ ಎಂದು ಹೇಳಿದ್ದಾರೆ. 
ಗೂಗಲ್ ನಿಂದ ಚೀನಾದಲ್ಲಿ ಪ್ರಯೋಗವಾಗುತ್ತಿರುವ ಬುದ್ಧಿಮತ್ತೆ ಅಲ್ಲಿನ ಸೇನೆಗೆ ಸಹಕಾರಿಯಾಗುತ್ತಿದೆ ಎಂಬ ಆಓಪ ಕೇಳಿಬಂದ ಬೆನ್ನಲ್ಲೇ ಅಮೆರಿಕದ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಗೂಗಲ್ ಅನುಮತಿ ಕೇಳಿದೆ.
SCROLL FOR NEXT