ಜಿಹಾದಿ ಉಗ್ರರ ಮೇಲೆ ಕಣ್ಣು: ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ಇಸ್ರೋ ಸರ್ವಸನ್ನದ್ಧ! 
ವಿಜ್ಞಾನ-ತಂತ್ರಜ್ಞಾನ

ಜಿಹಾದಿ ಉಗ್ರರ ಮೇಲೆ ಕಣ್ಣು: ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ಇಸ್ರೋ ಸರ್ವಸನ್ನದ್ಧ!

ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ.

ನವದೆಹಲಿ: ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ. 
ಇಸ್ರೋ ಮೇ.22 ರಂದು ಹೊಸ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಮೂಲಕ ಭಾರತ ಬಾಹ್ಯಾಕಾಶದಿಂದ ಮತ್ತಷ್ಟು ಪರಿಣಾಮಕಾರಿಯಾಗಿ ನಿಗಾ ವಹಿಸುವುದಕ್ಕೆ ಸಾಧ್ಯವಾಗಲಿದೆ. 
ರಿಸ್ಯಾಟ್-2ಬಿಆರ್ 1 ಮೇ.22 ರಂದು ಉಡಾವಣೆಯಾಗಲಿರುವ ಉಪಗ್ರಹವಾಗಲಿದೆ. 
ಹೊಸ ರಿಸ್ಯಾಟ್ ಉಪಗ್ರಹ ಈ ಹಿಂದಿನ ರಿಸ್ಯಾಟ್ ಉಪಗ್ರಹಕ್ಕಿಂತ ಅತ್ಯಾಧುನಿಕವಾಗಿದ್ದು, ರಿಸ್ಯಾಟ್ ನ x- ಬ್ಯಾಂಡ್ ಸಿಂಥೆಟಿಕ್ ಅಪೆಚ್ಯೂರ್ ರಡಾರ್ (ಎಸ್ಎಆರ್) ಎಲ್ಲಾ ರೀತಿಯ  ಹವಾಮಾನಗಳಲ್ಲೂ ನಿಗಾ ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಭದ್ರತಾ ಸಿಬ್ಬಂದಿಗಳಿಗೆ ಹೆಚ್ಚು ನೆರವಾಗಲಿದೆ. 
ದಟ್ಟವಾದ ಮೋಡಗಳನ್ನು ಭೇದಿಸಿ ಭೂಮಿಯ ಮೇಲೆ 1 ಮೀಟರ್ ನಷ್ಟು ಅಂತರಲ್ಲಿ ಇರುವ 2 ವಸ್ತುಗಳನ್ನು ನಿಖರವಾಗಿ ತೋರುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿರಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. 
ಭೂಮಿಯ ಮೇಲಿರುವ ಕಟ್ಟಡಗಳು ವಸ್ತುಗಳ ಮೇಲೆ ದಿನಕ್ಕೆ ಕನಿಷ್ಟ 2-3 ಬಾರಿ ಚಿತ್ರಗಳನ್ನು ತೆಗೆಯಲಿರುವ ಈ ಉಪಗ್ರಹ ಪ್ರಮುಖವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿರುವ ಜಿಹಾದಿ ಉಗ್ರರ ಕ್ಯಾಂಪ್ ಗಳ ಮೇಲೆ ಕಣ್ಣಿಟ್ಟಿರಲಿದೆ. ಎಲ್ಲಾ ಹವಾಮಾನಗಳಲ್ಲೂ ನಿಖರತೆಯ ಚಿತ್ರಗಳನ್ನು ಕಳಿಸುವ ಮೂಲಕ ಈ ಹೊಸ ಉಪಗ್ರಹ ಭಾರತೀಯ ಸೇನೆಗೆ ಉಗ್ರರ ಹೆಡೆಮುರಿಕಟ್ಟುವುದಕ್ಕೆ ಸಹಕಾರಿಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ

ಬೆಂಗಳೂರಿನಲ್ಲಿ ಜಪಾನಿಗನ ಬಂಧನ: 19 ದಿನ ಜೈಲುವಾಸ, 7 ವರ್ಷಗಳ ಬಳಿಕ ಕರ್ನಾಟಕ ಸರ್ಕಾರದಿಂದ 75 ಸಾವಿರ ಪರಿಹಾರ!

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚೂನರ್‌ ಕಾರಲ್ಲಿ ಬರುತ್ತಾನೆ ಪೌರಕಾರ್ಮಿಕ: ಸೈಕಲ್​ನಿಂದ ಐಷರಾಮಿ ಕಾರಿನವರೆಗೆ 'ಸೇಸಪ್ಪ'ರ ಯಶೋಗಾಥೆ!