ವಿಜ್ಞಾನ-ತಂತ್ರಜ್ಞಾನ

ಕಾರ್ಟೋಸ್ಯಾಟ್ 3 ಉಡಾವಣೆಗೆ 26 ಗಂಟೆಗಳ ಎಣಿಕೆ ಆರಂಭ

Srinivas Rao BV

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಾರ್ಟೋ ಸ್ಯಾಟ್ 3 ಹಾಗೂ ಅಮೆರಿಕದ 13 ವಾಣಿಜ್ಯ ಬಳಕೆಯ ನ್ಯಾನೋ ಸ್ಯಾಟಲೈಟ್ ಉಪಗ್ರಹಗಳ ಉಡಾವಣೆಗೆ 26 ಗಂಟೆಗಳ ಇಳಿಕೆ ಎಣಿಗೆ ಆರಂಭಿಸಿದೆ. 

ಪಿ ಎಸ್ ಎಲ್ ವಿ ಸಿ 47 ವಾಹಕ ಹೊತ್ತೊಯ್ಯುವ ಉಪಗ್ರಹಗಳ ಉಡಾವಣೆಗೆ ಮಂಗಳವಾರ ಬೆಳಗ್ಗೆ 7 ಗಂಟೆ 28 ನಿಮಿಷಕ್ಕೆ ಇಳಿಕೆ ಎಣಿಕೆ ಆರಂಭವಾಗಿದೆ.  ಬುಧವಾರ ಬೆಳಗ್ಗೆ 9 ಗಂಟೆ 28 ನಿಮಿಷಕ್ಕೆ ಉಡಾವಣೆ ನಿಗದಿಯಾಗಿದೆ ಎಂದು ಇಸ್ರೋ ತಿಳಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇದು 74 ನೇ ಉಡಾವಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಟೋ ಸ್ಯಾಟ್ 3 ಉಪಗ್ರಹ ಮೂರನೇ ಪೀಳಿಗೆಯ ಅತ್ಯಾಧುನಿಕ ಉಪಗ್ರಹವಾಗಿದೆ. 509 ಕಿಲೋಮೀಟರ್ ದೂರದಲ್ಲಿನ ಕಕ್ಷೆಯಲ್ಲಿ ಸಮಭಾಜಕ ವೃತ್ತಕ್ಕೆ 97.5 ಡಿಗ್ರಿಯಲ್ಲಿ ಉಪಗ್ರಹವನ್ನು ಇರಿಸಲಾಗುವುದು. ಪಿ ಎಸ್ ಎಲ್ ವಿ ಸಿ 47 ಉಡಾವಣಾ ವಾಹಕ ಅಮೆರಿಕದ 13 ವಾಣಿಜ್ಯ ಬಳಕೆಯ ಉಪಗ್ರಹಗಳನ್ನು ಹೊತ್ತೊಯ್ಯಲಿದೆ.

SCROLL FOR NEXT