ವಿಜ್ಞಾನ-ತಂತ್ರಜ್ಞಾನ

ಐಕಾನ್ ಉಪಗ್ರಹ ಉಡಾವಣೆಯನ್ನು 24 ಗಂಟೆಗಳ ಕಾಲ ಮುಂದೂಡಿದ ನಾಸಾ

Srinivas Rao BV

ವಾಷಿಂಗ್ಟನ್ (ಸ್ಪುಟ್ನಿಕ್): ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಐಯೋನೋಸ್ಫೆರಿಕ್ ಕನೆಕ್ಷನ್ ಎಕ್ಸ್ ಪ್ಲೋರರ್ (ಐಕಾನ್) ಉಪಗ್ರಹವನ್ನೊಳಗೊಂಡ ಪೆಗಸಸ್ ಎಕ್ಸ್ ಎಲ್ ಕ್ಯಾರಿಯರ್ ರಾಕೆಟ್ ಉಡಾವಣೆಯನ್ನು ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ 24 ಗಂಟೆಗಳ ಕಾಲ ಮುಂದೂಡಿದೆ.

ಈ ರಾಕೆಟ್ ನ ಉಡಾವಣಾ ಸಮಯವನ್ನು ಗುರುವಾರ ಮಧ್ಯಾಹ್ನ 1.30ಕ್ಕೆ ನಿಗದಿಪಡಿಸಲಾಗಿತ್ತು. ಹವಾಮಾನ ವೈಪರಿತ್ಯದಿಂದ ಪೆಗಸಸ್ ಎಕ್ಸ್ ಎಲ್ ಹಾಗೂ ಐಕಾನ್ ಉಡಾವಣೆಯನ್ನು ಅ.10ರಂದು ರಾತ್ರಿ 9.30ಕ್ಕೆ ಮುಂದೂಡಲಾಗಿದೆ ಎಂದು ನಾಸಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪೆಗಸಸ್ ಅನ್ನು 2017ರಲ್ಲೇ ಉಡಾವಣೆ ಮಾಡಬೇಕಿತ್ತಾದರೂ,ತಾಂತ್ರಿಕ ದೋಷದಿಂದ ಮೂರು ಬಾರಿ ಮುಂದೂಡಲ್ಪಟ್ಟಿತು. ಐಕಾನ್ ಉಪಗ್ರಹವನ್ನು ಬಾಹ್ಯಾಕಾಶ ವಾತಾವರಣದ  ಭೌತಶಾಸ್ತ್ರವನ್ನು ಅದ್ಯಯನ ಮಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. 

SCROLL FOR NEXT