ವಿಜ್ಞಾನ-ತಂತ್ರಜ್ಞಾನ

ಇಸ್ರೇಲ್ ನ ಸ್ಪೈವೇರ್ ಬಳಸಿ ಭಾರತೀಯ ಪತ್ರಕರ್ತರ ವಾಟ್ಸ್ ಆಪ್ ಬೇಹುಗಾರಿಕೆ! 

Srinivas Rao BV

ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ತನ್ನ ನಿರ್ದಿಷ್ಟ ಬಳಕೆದಾರರ ಖಾತೆಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ. 

ಜತತ್ತಿನಾದ್ಯಂತ ಹಲವು ವಾಟ್ಸ್ ಆಪ್ ಖಾತೆಗಳ ಮೇಲೆ ಬೇಹುಗಾರಿಕೆ ನಡೆದಿದ್ದು, ಈ ಪೈಕಿ ಭಾರತೀಯ ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರ ವಾಟ್ಸ್ ಆಪ್ ಖಾತೆಗಳನ್ನು ಬೇಹುಗಾರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಈ ರೀತಿ ಬೇಹುಗಾರಿಕೆ ನಡೆಸುವುದಕ್ಕೆ ಇಸ್ರೇಲ್ ನ ಸ್ಪೈವೇರ್ ಎಂಬ ಪೆಗಾಸಸ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ವಾಟ್ಸ್ ಆಪ್ ಹೇಳಿದೆ. ಇಸ್ರೇಲ್ ನ ಕಣ್ಗಾವಲು ಸಂಸ್ಥೆ ಎನ್ಎಸ್ಒ ಸಮೂಹ ಈ ತಂತ್ರಜ್ಞಾನದ ಹಿಂದೆ ಇದ್ದು, ಸುಮಾರು 1,400 ಬಳಕೆದಾರರ ವಾಟ್ಸ್ ಆಪ್ ಖಾತೆಗಳನ್ನು ಬೇಹುಗಾರಿಕೆ ಮಾಡಲಾಗಿದೆ. 

4 ಖಂಡಗಳ ರಾಜತಾಂತ್ರಿಕರು, ರಾಜಕೀಯ ಭಿನ್ನಮತೀಯರು, ಪತ್ರಕರ್ತರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ವಾಟ್ಸ್ ಆಪ್ ಖಾತೆಗಳು ಸಹ ಬೇಹುಗಾರಿಕೆಗೊಳಗಾಗಿವೆ.ವಿಡಿಯೋ ಕಾಲಿಂಗ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು ಬೇಹುಗಾರಿಕೆ ಮಾಡಲಾಗಿದೆ, ಈ ಕೃತ್ಯ ಯಾರ ಆಣತಿಯಿಂದ ನಡೆಸಲಾಗಿದೆ ಎಂಬುದು ಈ ವರೆಗೂ ತಿಳಿದುಬಂದಿಲ್ಲ. 

ಇಸ್ರೇಲಿ ಸೈಬರ್ ಗುಪ್ತಚರ ಸಂಸ್ಥೆ ಎನ್ಎಸ್ಒ ಸಮೂಹದ ವಿರುದ್ಧ ವಾಟ್ಸ್ ಆಪ್ ಕ್ಯಾಲಿಫೋರ್ನಿಯಾದಲ್ಲಿ ಕೇಸ್ ದಾಖಲಿಸಿತ್ತು. ಆದರೆ ವಾಟ್ಸ್ ಆಪ್ ಆರೋಪವನ್ನು ಸಮರ್ಥಿಸಿಕೊಂಡ ಎನ್ಎಸ್ಒ, ಈ ತಂತ್ರಜ್ಞಾನವನ್ನು ಭಯೋತ್ಪಾದನೆ ಹಾಗೂ ಹೀನ ಅಪರಾಧ ಪ್ರಕರಣಗಳಲ್ಲಿ ಸರ್ಕಾರಿ ಗುಪ್ತಚರ ಇಲಾಖೆ ಹಾಗೂ ಜಾರಿ ಸಂಸ್ಥೆಗಳಿಗೆ ಸಹಾಯ ಮಾಡುವ ಉದ್ದೇಶದಿಂದ ನೀಡಲಾಗಿದೆ ಎಂದು ಹೇಳಿದೆ. 

SCROLL FOR NEXT