ವಿಜ್ಞಾನ-ತಂತ್ರಜ್ಞಾನ

ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಇಳಿಕೆ ತುಂಬಾ ಕಷ್ಟ: ಯೂರೋಪ್ ಸಂಸ್ಥೆ

Nagaraja AB

ಮುಂಬೈ:ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯ ಯಶಸ್ವಿ ಇಳಿಕೆ ಅಸಾಧ್ಯ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದ್ದು, ಇಸ್ರೋ ಸಾಹಸವನ್ನು ಶ್ಲಾಘಿಸಿದೆ. 

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ರೀತಿಯ ಮಾನವ ರಹಿತ ಮಿಷನ್  ಯೋಜನೆಯನ್ನು ಕಳೆದ ವರ್ಷವೇ  ಹಾಕಿಕೊಂಡಿತ್ತು.ಚಂದ್ರನ  ದಕ್ಷಿಣ ಧ್ರುವದಲ್ಲಿ  ಬಾಹ್ಯಾಕಾಶ ನೌಕೆಯ ಲ್ಯಾಂಡಿಂಗ್ ಆಗುವ ಯೋಜನೆಗೆ ಅಗತ್ಯ ಪ್ರಮಾಣದ ಹಣಕಾಸು ದೊರೆಯದ  ಹಿನ್ನೆಲೆಯಲ್ಲಿ ಆ ಯೋಜನೆಯನ್ನು ರದ್ದುಗೊಳಿಸಲಾಗಿತ್ತು.

ಯೋಜನೆಯ ಹಂತದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯ ಇಳಿಕೆ ಅಸಾಧ್ಯ ಎಂಬಂತಹ ವರದಿಯನ್ನು ತಯಾರಿಸಲಾಗಿತ್ತು.ಚಂದ್ರನ ದಕ್ಷಿಣ ಧ್ರುವದಲ್ಲಿ ವಾತವಾರಣ ಸಂಕೀರ್ಣತೆಯಿಂದ ಕೂಡಿದ್ದು,  ಕಣಗಳು ಹಾಗೂ ವಿಕಿರಣತೆಗಳು ಚಂದ್ರನ ಮೇಲಿನ ದೂಳನ್ನು ಸಂಪರ್ಕಿಸುತ್ತವೆ. ಇದರಿಂದಾಗಿ ಅಪಾಯವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. 

ಚಂದ್ರನಲ್ಲಿನ ದೂಳು ಉಪಕರಣಗಳ ಮೇಲೆ ಅಂಟಿಕೊಂಡು ಯಂತ್ರೋಪಕರಣಗಳಿಗೆ ಹಾನಿಯಾಗಲಿದೆ. ಸೌರ ಫಲಕ ಹಾಗೂ ಇನ್ನಿತರ ಮೇಲ್ಮೈಗಳ  ದಕ್ಷತೆ ಕ್ಷೀಣಿಸಲಿದೆ. ಬಾಹ್ಯಾಕಾಶ ನೌಕೆ ಇಳಿಯುವಾಗ  ಸೌರ ಶಕ್ತಿ ಉತ್ಪಾದನೆ ಬಂದ್ ಆಗದಂತೆ  ಹದ್ದಿನ ಕಣ್ಣಿಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. 

2020ರ ವೇಳೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ರೊಬೊಟಿಕ್ ಮಿಷನ್  ಸಿದ್ಧತಾ ಕಾರ್ಯದಲ್ಲಿ ಕೆನಡಾ, ಜಪಾನ್ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಪ್ರದೇಶದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಲು 17 ವಿಧದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. 
 

SCROLL FOR NEXT