ವಿಜ್ಞಾನ-ತಂತ್ರಜ್ಞಾನ

ಕೊರೋನಾ ಲಾಕ್‌ಡೌನ್  ವೇಳೆ ಆಹಾರ, ಆಶ್ರಯ ಅರಸುವವರಿಗೆ ಗೂಗಲ್ ಮ್ಯಾಪ್ ನೆರವು

Raghavendra Adiga

ನವದೆಹಲಿ: ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಾಗಿ ಜನರು ಹುಡುಕಾಟ ನಡೆಸುವುದನ್ನು ತಡೆಯಲು ಅಂತಹಾ ಜನರ ಸಹಾಯಕ್ಕಾಗಿ  ಗೂಗಲ್ ಮುಂದೆ ಬಂದಿದೆ. ಗೂಗಲ್ ತನ್ನ ಗೂಗಲ್ ಮ್ಯಾಪಿನಲ್ಲಿ  ಭಾರತದಾದ್ಯಂತದ ನಗರಗಳಲ್ಲಿನ ಆಹಾರ ತಾಣಗಳು ಹಾಗೂ ರಾತ್ರಿ ವೇಳೆ ತಂಗಲು ಸೂಕ್ತವಾದ ಆಶ್ರಯ ತಾಣಗಳ ವಿವರ ಅಳವಡಿಸಿದೆ.

ಪರಿಹಾರ ಕೇಂದ್ರಗಳ ಪತ್ತೆಮಾಡಲು ಗೂಗಲ್ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

"ಇಲ್ಲಿಯವರೆಗೆ, 30 ನಗರಗಳಲ್ಲಿ ಜನರು ಗೂಗಲ್ ಮ್ಯಾಪಿನ ಮೂಲಕ ಊಟ ಹಾಗೂ ಆಶ್ರಯ ತಾಣಗಳ ಪತ್ತೆ ಮಾಡಬಹುದಾಗಿದೆ." ಯಾವುದೇ ಗೂಗಲ್ ಪ್ರಾಡಕ್ಟ್ ಗಳಲ್ಲಿ ಬಳಕೆದಾರರು 'ಫುಡ್ ಶೆಲ್ಟರ್ ಇನ್' ಅಥವಾ 'ನೈಟ್ ಶೆಲ್ಟರ್ ಇನ್' ಗಾಗಿ ಹುಡುಕಬಹುದು. ಈ ಸೇವೆಯನ್ನು ಶೀಘ್ರದಲ್ಲೇ ಹಿಂದಿಯಲ್ಲಿಯೂ ಪ್ರಾರಂಭಿಸಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

ಮುಂಬರುವ ವಾರಗಳಲ್ಲಿ ಈ ಸೇವೆಯನ್ನು ಇತರ ಭಾರತೀಯ ಭಾಷೆಗಳಲ್ಲಿಯೂ ವಿಸ್ತರಿಸಲು  ಗೂಗಲ್ ಕೆಲಸ ಮಾಡುತ್ತಿದೆ, ಜೊತೆಗೆ ದೇಶಾದ್ಯಂತ ಹೆಚ್ಚಿನ ನಗರಗಳಲ್ಲಿ ಹೆಚ್ಚುವರಿ  ವಿವರಗಳನ್ನು ಸೇರ್ಪಡಿಸುತ್ತಿದೆ."ಕೊರೋನಾವೈರಸ್ ಪರಿಸ್ಥಿತಿ ಬೆಳೆದಂತೆ, ಈ ಅಗತ್ಯ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಪರಿಹಾರಗಳನ್ನು ಹುಡುಕಲು  ನಾವು ಒಂದು ಸಮಗ್ರ ಪ್ರಯತ್ನವನ್ನು ಮಾಡುತ್ತಿದ್ದೇವೆ" ಎಂದು ಗೂಗಲ್ ಇಂಡಿಯಾ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಅನಲ್ ಘೋಷ್ ಹೇಳಿದ್ದಾರೆ.

"ಸ್ವಯಂಸೇವಕರು, ಎನ್ಜಿಒಗಳು ಮತ್ತು ಸಂಚಾರ ಅಧಿಕಾರಿಗಳ ಸಹಾಯದಿಂದ, ಈ ಪ್ರಮುಖ ಮಾಹಿತಿಯನ್ನು ಸಂತ್ರಸ್ಥರಿಗೆ ತಲುಪಿಸಲು  ನಾವು ಆಶಿಸುತ್ತೇವೆ,"ಅವರು ಹೇಳಿದರು.

SCROLL FOR NEXT