ವಿಜ್ಞಾನ-ತಂತ್ರಜ್ಞಾನ

ಕ್ಷೀರಪಥದಲ್ಲಿ ಪ್ರಕಾಶಮಾನತೆ ಕಳೆದುಕೊಳ್ಳುತ್ತಿರುವ ನಕ್ಷತ್ರ: ಖಗೋಳ ವಿಜ್ಞಾನಿಗಳಿಗೆ ಕೌತುಕ

Sumana Upadhyaya

ಪ್ಯಾರಿಸ್: ಕ್ಷೀರಪಥದಲ್ಲಿ ಬೆಟೆಲ್‌ಗ್ಯೂಸ್‌ ಹೆಸರಿನ ಪ್ರಕಾಶಮಾನವಾದ ನಕ್ಷತ್ರ ಇತ್ತೀಚಿನ ತಿಂಗಳುಗಳಲ್ಲಿ ಪ್ರಕಾಶಮಾನತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ (ಇಎಸ್‌ಒ) ಹೇಳಿದೆ. 


ಮೇಲ್ಮೈ ಪ್ರಕಾಶಮಾನತೆ ಕಳೆದುಕೊಳ್ಳುತ್ತಿರುವ ಕೆಂಪು ನಕ್ಷತ್ರವನ್ನು ತೋರಿಸುವುದು ಮಾತ್ರವಲ್ಲದೆ ಅದರ ಸ್ಪಷ್ಟ ಆಕಾರ ಹೇಗೆ ಬದಲಾಗುತ್ತಿದೆ ಎಂಬುದನ್ನು ಸಹ ತೋರಿಸುತ್ತದೆ ಎಂದು ಖಗೋಳಶಾಸ್ತ್ರಜ್ಞರು ವೀಕ್ಷಣಾಲಯದ ದೊಡ್ಡ ಟೆಲಿಸ್ಕೋಪ್ (ವಿಎಲ್‌ಟಿ) ಯನ್ನು ಬಳಸುವ ಮೂಲಕ ಹೇಳಿದ್ದಾರೆ.


ಬೆಲ್ಜಿಯಂನ ಕೆಯು ಲ್ಯುವೆನ್ ವಿಶ್ವವಿದ್ಯಾಲಯದ ಖಗೋಳವಿಜ್ಞಾನಿ ಮಿಗ್ಯುಲ್ ಮೊಂಟರ್ಗೆಸ್ ನೇತೃತ್ವದ ತಂಡ ಇಎಸ್ಒದ ವಿಎಲ್ ಟಿ  ಮೂಲಕ ಕಳೆದ ಡಿಸೆಂಬರ್ ನಿಂದ ನಕ್ಷತ್ರವನ್ನು ಗಮನಿಸುತ್ತಿದ್ದು ಅದರ ಬಣ್ಣವೇಕೆ ಮಬ್ಬಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.


ಬರಿಗಣ್ಣಿನಿಂದ ನೋಡಿದಾಗಲೂ ಸಹ ಈ ಪ್ರಕಾಶಮಾನತೆ ಕಳೆದುಕೊಳ್ಳುವುದು ಗೋಚರಿಸುತ್ತಿದ್ದು ಸಾಮಾನ್ಯ ಪ್ರಕಾಶತೆಗಿಂತ ಶೇಕಡಾ 36ರಷ್ಟಿದೆ ಎಂದು ಖಗೋಳವಿಜ್ಞಾನಿಗಳ ತಂಡ ಹೇಳುತ್ತದೆ.

SCROLL FOR NEXT