ವಿಜ್ಞಾನ-ತಂತ್ರಜ್ಞಾನ

ಬೆದರಿಕೆ ವಿರೋಧಿ ಅಪ್ಲಿಕೇಷನ್ ಸೃಷ್ಟಿಸಿದ 9 ವರ್ಷದ ಮೇಘಾಲಯ ಬಾಲಕಿಗೆ ಸಿಲಿಕಾನ್ ವ್ಯಾಲಿಯಿಂದ ಆಹ್ವಾನ!

Raghavendra Adiga

ಗುವಾಹತಿ: ಒಂಬತ್ತು ವರ್ಷದ ಮೇಘಾಲಯ ಹುಡುಗಿಯೊಬ್ಬಳು ಆಂಟಿ ಬುಲ್ಲಿಂಗ್ (ಬೆದರಿಕೆ ವಿರೋಧಿ) ಅಪ್ಲಿಕೇಷನ್ ರೂಪಿಸುವ ಮೂಲಕ ಸಿಲಿಕಾನ್ ವ್ಯಾಲಿಗೆ ಸಿಲಿಕಾನ್ ವ್ಯಾಲಿಯೇ ಬೆರಗಾಗುವಂತೆ ಮಾಡಿದ್ದಾಳೆ.

ಶಿಲ್ಲಾಂಗ್‌ನನಾಲ್ಕನೇ ತರಗತಿ ವಿದ್ಯಾರ್ಥಿನಿ ಮೈದೈಬಹುನ್ ಮಝಾವ್ ನ್‌ಲೈನ್ ಪೋರ್ಟಲ್ ವೈಟ್ ಹ್ಯಾಟ್ ಜೂನಿಯರ್ 12 ವಿಜೇತೆಯಾಗಿದ್ದಾರೆ. 

ಕೋಡಿಂಗ್‌ನ ಮೂಲಭೂತ ಅಂಶಗಳನ್ನು ಕಲಿಯಲು ಮಕ್ಕಳಿಗೆ ಸಹಾಯ ಮಾಡುವ ಪೋರ್ಟಲ್ ಒಂದು "ಕುದೋಸ್ ಮೈ ಮೈ ಇವರು ನಾವು ಆಯ್ಕೆ ಮಾಡಿದ 12 ವಿಜೇತರಲ್ಲಿ ಒಬ್ಬರು. ಮೈ ಮೈ ಶೀಘ್ರವೇ ಸಿಲಿಕಾನ್ ವ್ಯಾಲಿಗೆ ಹಾರಲಿದ್ದಾರೆ ಹಾಗೂ ಗೂಗಲ್ ವಿಜ್ಞಾನಿಗಳು, ವೇಮೊ ಎಂಜಿನಿಯರ್‌ಗಳು, ನೆಕ್ಸಸ್ ವೆಂಚರ್ಸ್‌ನ ವಿಸಿ ಮತ್ತು ಇನ್ನೂ ಅನೇಕರನ್ನು ಭೇಟಿಯಾಗಲಿದ್ದಾರೆ" ಎಂದು ಟ್ವೀಟ್ ಮಾಡಿದೆ. 

ಮೇ ತಿಂಗಳಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆವ ಕಾರ್ಯಕ್ರಮದಲ್ಲಿ ಮೈದೈಬಹುನ್ ಭಾಗವಹಿಸಲಿದ್ದು ಇವರು ಈಶಾನ್ಯದ ಕಿರಿಯ ಉದ್ಯಮಿ ಆಗಿರಲಿದ್ದಾರೆ. ಮತ್ತು  ಸಿಲಿಕಾನ್ ವ್ಯಾಲಿಯಲ್ಲಿ ಪ್ರೇಕ್ಷಕರ ಮುಂದೆ ಆಕೆ ತನ್ನ ಅಪ್ಲಿಕೇಶನ್‌ನ ಪ್ರಸ್ತುತಿ ನೀಡಲಿದ್ದಾರೆ.

ನಿಜಕ್ಕೂ ಬೆದರಿಕೆ ಎನ್ನುವುದು ರ‍್ಯಾಗಿಂಗ್‌ನಂತೆ ಚರ್ಚಿಸಲ್ಪಡುತ್ತಿಲ್ಲವಾದರೂ ಇದು ಪಶ್ಚಿಮ ರಾಷ್ಟ್ರಗಳಲ್ಲಿ ಮಹತ್ವದ ವಿಚಾರವಾಗಿದೆ. . ಇದನ್ನು ಗಮನಿಸಿದರೆ,ಬಾಲಕಿ ತಯಾರಿಸಿರುವ ಈ ಅಪ್ಲಿಕೇಷನ್ ಪ್ರಪಂಚದಾದ್ಯಂತ ಭಾರಿ ಯಶಸ್ಸನ್ನು ಗಳಿಸಲಿದೆ ಎಂದು ಯೋಜಿಸಬಹುದು.

ತನ್ನ ಅಪ್ಲಿಕೇಶನ್ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ  ಇತರರು ಅನಾಮಧೇಯರು ಬೆದರಿಸುವಾಗ ಅವರ ವಿರುದ್ಧ ತಮ್ಮ ಶಿಕ್ಷಕರು, ಪೋಷಕರಿಗೆಎಚ್ಚರಿಕೆ ನೀಡಲು ಸಹಕರಿಸುತ್ತದೆಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೈಟ್ ಹ್ಯಾಟ್ ಜೂನಿಯರ್‌ಗೆ ದಾಖಲಾದ ಮೂರು ತಿಂಗಳೊಳಗೆ ನಾನಿದನ್ನು ಅಭಿವೃದ್ಧಿಪಡಿಸಿದ್ದೇನೆ.ಒಂದೊಮ್ಮೆ ಇದಕ್ಕೆ ಅಪ್ರೂವಲ್ ಸಿಕ್ಕಿದ್ದಾದರೆ ಮುಂದಿನ ದಿನಗಳಲ್ಲಿ ಪ್ಲೇ ಸ್ಟೋ ರ್ ಗಳಲ್ಲಿ ದೊರಕಲಿದೆ ಎಂದು ಬಾಲಕಿ ಹೇಳೀದ್ದಾಳೆ.

ಬೆದರಿಸುವಿಕೆ ನನ್ನ  ಶಾಲೆಯಲ್ಲಿ ನಾನು ಮುಖಾಮುಖಿಯಾಗಿ ಕಂಡ ವಿಚಾರ. ಎನ್ನುವ ಮೈದೈಬಹುನ್ ಗ್ರಾಹಕರು ಮಾನವನ ಉಪಸ್ಥಿತಿಯಿಲ್ಲದೆ ಉಪಾಹಾರ ಗೃಹದಲ್ಲಿ ಆರ್ಡರ್ ನೀಡಲು ಅನುಕೂಲ ಕಲ್ಪಿಸುತ್ತದೆ. 

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಬಾಲಕಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ."ತನ್ನನ್ನು ಬೆದರಿಸುವವರ ಬಗೆಗೆ ಪೋಷಕರು, ಶಿಕ್ಷಕರಿಗೆ ತಿಳಿಸಲು ಸಂತ್ರಸ್ಥೆಗೆ ಅನುಕೂಲ ಕಲ್ಪಿಸುವ ಈ ಅಪ್ಲಿಕೇಷನ್ ರಚಿಸಿದ ಮೈದೈಬಹುನ್ ಒಂಬತ್ತು ವರ್ಷದ ಬಾಲಕಿ, ಸಿಲಿಕಾನ್ ವ್ಯಾಲಿಗೆ ಹೋಗಲು ಆಯ್ಕೆಯಾದ 12 ಜನರಲ್ಲಿ ಒಬ್ಬರು ಎಂದು ತಿಳಿಯಲು ಸಂತಸವಾಗುತ್ತದೆ. ಕನಸು ನನಸಾಗಿದೆ. ಅವಳ ಬಗ್ಗೆ ತುಂಬಾ ಹೆಮ್ಮೆ ಇದೆ, ”ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಅವರಿಗೆ ವಿಶೇಷ ಮೆಚ್ಚುಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನು ದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಆರ್.ಪಿ.ನಿಶಾಂಕ್ ನೀಡಿದ್ದರು

SCROLL FOR NEXT