ವಿಜ್ಞಾನ-ತಂತ್ರಜ್ಞಾನ

ನೌಕಾಪಡೆಗೆ ಮತ್ತಷ್ಟು ಬಲ, ಸ್ವದೇಶೀ ನಿರ್ಮಿತ ಕೆ -4 ನ್ಯೂಕ್ಲಿಯರ್ ಕ್ಷಿಪಣಿ ಪರೀಕ್ಷೆ ಯಶಸ್ವಿ

Raghavendra Adiga

ವಿಶಾಖಪಟ್ಟಣಂ: ಭಾರತದ ರಕ್ಷಣಾ ಪಡೆಗಳ ಶಕ್ತಿ ಪ್ರವರ್ಧನೆಗೆ ಕಾರಣವಾಗಬಲ್ಲ  3,500 ಕಿ.ಮೀ ಸ್ಟ್ರೈಕ್ ರೇಂಜ್ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ  ಲಾಂಚರ್  ಕೆ -4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ನೀರೊಳಗಿನ ನಿಗದಿತ ವೇದಿಕೆಯಿಂದ  ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.

ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ವರದಿಗಳ ಪ್ರಕಾರ, ಕ್ಷಿಪಣಿಯನ್ನು ಭಾರತೀಯ ನೌಕಾಪಡೆಯ ಸ್ಥಳೀಯ ಐಎನ್‌ಎಸ್ ಅರಿಹಂತ್-ವರ್ಗದ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳಲ್ಲಿ ಅಳವಡಿಸಲಾಗುವುದು. ಪರಮಾಣು ಜಲಾಂತರ್ಗಾಮಿ ಗುತ್ತಿಗೆಗಾಗಿ ಭಾರತ-ರಷ್ಯಾ 3 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ.

ಕೆ -4 ಪರಮಾಣು ಸಾಮರ್ಥ್ಯದ ಮಧ್ಯಂತರ ಶ್ರೇಣಿಯ ಜಲಾಂತರ್ಗಾಮಿ-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು  ಐಎನ್ಎಸ್ ಅರಿಹಂತ್ ಗೆ ಅಗ್ನಿ -3 ಅನ್ನು ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಂದರೆಗಳನ್ನು ಎದುರಿಸಿದ ನಂತರ ಕೆ -4 ಅನ್ನು ಅಭಿವೃದ್ಧಿಪಡಿಸುವ ಕೆಲಸ ಪ್ರಾರಂಭವಾಯಿತು. ಕ್ಷಿಪಣಿ 1.3 ಮೀಟರ್ ವ್ಯಾಸ ಹೊಂದಿ 12 ಮೀಟರ್ ಉದ್ದವಿದೆ ಎಂದು ವರದಿಯಾಗಿದೆ. ಇದರ ತೂಕ ಸುಮಾರು 17 ಟನ್ ಆಗಿದೆ.

ಕೆ -4 2 ಟನ್ ತೂಕದ ವಾರ್ಹೆಡ್ ಅನ್ನು ಸಾಗಿಸಬಲ್ಲದು ಮತ್ತು ಇದು ಘನ ರಾಕೆಟ್ ಪ್ರೊಪೆಲ್ಲಂಟ್ ಅನ್ನು ಹೊಂದಿದೆ. 2010 ರ ಜನವರಿಯಲ್ಲಿ  ಕೆ -4 ರ ಅಭಿವೃದ್ಧಿಪಡಿಸುವ ಮೊದಲ ಪರೀಕ್ಷೆ ಪ್ರಾರಂಭವಾಗಿತ್ತು. ಆ ಕ್ಷಿಪಣಿಯನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಕರಾವಳಿಯಿಂದ 45 ನಾಟಿಕಲ್ ಮೈಲಿ ದೂರದಲ್ಲಿರುವ ಐಎನ್ಎಸ್ ಅರಿಹಂತ್ ನಿಂದ ಮಾರ್ಚ್ 31, 2016 ರಂದು ಮೊದಲಿಗೆ ಪರೀಕ್ಷೆ ನಡೆಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕ್ಷಿಪಣಿಯನ್ನು ಪರೀಕ್ಷಿಸಬೇಕಿತ್ತು, ಆದರೆ ಬುಲ್ ಬುಲ್ ಚಂಡಮಾರುತದಿಂದಾಗಿ ಅದನ್ನು ಮುಂದೂಡಲಾಗಿತ್ತು ಎಂದು ವರದಿ ಹೇಳಿದೆ.
 

SCROLL FOR NEXT