ವಿಜ್ಞಾನ-ತಂತ್ರಜ್ಞಾನ

'ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದ್ದು, ಬಳಕೆದಾರರು ಭಯಪಡುವ ಅಗತ್ಯವಿಲ್ಲ'

Srinivasamurthy VN

ನವದೆಹಲಿ: ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದ್ದು, ಬಳಕೆದಾರರು ಭಯಪಡುವ ಅಗತ್ಯವಿಲ್ಲ. ಅವರ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಆ್ಯಪ್ ತಯಾರಿಕಾ ತಂಡ ಹೇಳಿದೆ.

ಎಥಿಕಲ್ ಹ್ಯಾಕರ್ ಖಾತೆದಾರನೋರ್ವ ಆರೋಗ್ಯ ಸೇತು ಆ್ಯಪ್ ಹ್ಯಾಕ್ ಆಗಿದ್ದು, ಖಾಸಗಿಯಾಗಿ ಸಂಪರ್ಕಿಸಿದರೆ ಮಾಹಿತಿ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದ. ಈ ಟ್ವೀಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸೇತು ಆ್ಯಪ್ ತಂಡ ಆ್ಯಪ್ ಸಂಪೂರ್ಣ  ಸುರಕ್ಷಿತವಾಗಿದ್ದು, ಬಳಕೆದಾರರು ಆತಂಕ ಪಡುವ ಅಗತ್ಯವಿಲ್ಲ. ಬಳಕೆದಾರರ ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಹೇಳಿದೆ.

ಆ್ಯಪ್ ಬಳಕೆದಾರರ ಲೊಕೇಷನ್ ಅನ್ನು ಅತ್ಯಂತ ಸುರಕ್ಷಿತ ಸರ್ವರ್ ನಲ್ಲಿ ಶೇಕರಿಸುತ್ತದೆ. ಹೀಗೆ ಶೇಖರಣೆಯಾದ ದತ್ತಾಂಶಗಳು ಎಂಕ್ರಿಪ್ಟೆಡ್ ಮತ್ತು ಅನಾಮಧೇಯ ರೀತಿಯಲ್ಲಿರುತ್ತದೆ. ಆ್ಯಪ್ ನಲ್ಲಿ ಕೊರೋನಾ ವೈರಸ್ ರೋಗಿಗಳನ್ನು ನಿಗಾದಲ್ಲಿ ಇರಿಸುತ್ತದೆ. ರೋಗಿಗಳ ಲೋಕೇಷನ್  ಟ್ರಾಕ್ ಮಾಡುವುದರಿಂದ ಅವರ ಸುತ್ತಮತ್ತಲಿನ ಜನರನ್ನು ಎಚ್ಚರಿಸುತ್ತದೆ. ಈ ಎಲ್ಲಾ ಮಾಹಿತಿ ಬಳಕೆದಾರರಿಗೆ ತಿಳಿದಿದ್ದು. ಇದನ್ನು ಹೊರತು ಪಡಿಸಿ ಬಳಕೆದಾರರ ವೈಯುಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದೆ.

ಅಂತೆಯೇ ಆ್ಯಪ್ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಾವು ನಮ್ಮ ಸಿಸ್ಟಂ ಅನ್ನು ಸದಾ ಅಪ್ ಗ್ರೇಡ್ ಮಾಡುತ್ತಿದ್ದು, ಆಗ್ಗಿಂದಾಗ್ಗೆ ಪರೀಕ್ಷೆಗೊಳಪಡಿಸುತ್ತಿರುತ್ತೇವೆ ಎಂದು ಹೇಳಿದೆ.

ಆರೋಗ್ಯ ಸೆತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್‌ ಆಗಿದ್ದು, ನಾಗರಿಕರಿಗೆ ಕೋವಿಡ್ -19 ಸೋಂಕಿನ ಅಪಾಯವನ್ನು ಗುರುತಿಸಲು ಸಹಾಯ ಮಾಡುತ್ತದೆ.

SCROLL FOR NEXT