ವಿಜ್ಞಾನ-ತಂತ್ರಜ್ಞಾನ

ಅಮೆರಿಕದ ಗಗನ ನೌಕೆಗೆ ಭಾರತ ಮೂಲದ ಗಗನಾಯಾತ್ರಿ ಕಲ್ಪನಾ ಚಾವ್ಲಾ ಹೆಸರು!

Srinivasamurthy VN

ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಉಡಾವಣೆಯಾಗಲಿರುವ ಅಮೆರಿಕದ ಬಾಹ್ಯಾಕಾಶ ನೌಕೆಗೆ ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರಿಡಲಾಗಿದೆ.

ಈ ಬಗ್ಗೆ ನಾಸಾ ಮಾಹಿತಿ ನೀಡಿದ್ದು, ಇದೇ 29ರಂದು ಉಡಾವಣೆಯಾಗಲಿರುವ 'ಎನ್‌ಜಿ–14 ಸಿಗ್ನಸ್‌' ಎಂಬ ಗಗನನೌಕೆಗೆ ಕಲ್ಪನಾ ಚಾವ್ಲಾ ಅವರ ಹೆಸರಿಡಲಾಗಿದೆ. ಅಮೆರಿಕದ ಪ್ರತಿಷ್ಠಿತ, ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಕಂಪನಿ ನಾರ್ಥ್‌ರಾಪ್‌ ಗ್ರುಮ್ಯಾನ್‌, ಬಾಹ್ಯಾಕಾಶ ಯಾನ ಕೈಗೊಂಡ ಮೊದಲ  ಭಾರತ ಮೂಲದ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಕಲ್ಪನಾ ಚಾವ್ಲಾಗೆ ಈ ಗೌರವ ನೀಡಿದೆ.

ವರ್ಜಿನಿಯಾದಲ್ಲಿ ನಾಸಾಕ್ಕೆ ಸೇರಿದ ವಾಲಪ್ಸ್‌ ಫ್ಲೈಟ್‌ ಫೆಸಿಲಿಟಿಯಿಂದ ಸೆಪ್ಟೆಂಬರ್‌ 29ರಂದು ಈ ಗಗನನೌಕೆ ಉಡಾವಣೆಯಾಗುತ್ತಿದ್ದು. ಎರಡು ದಿನಗಳ ನಂತರ ಈ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಈ ನೌಕೆ ಬಾಹ್ಯಾಕಾಶ ಅನ್ವೇಷಣೆ,  ಸಂಶೋಧನೆಗೆ ಅಗತ್ಯವಿರುವ ಒಟ್ಟು 3,629 ಕೆ.ಜಿ ತೂಕದ ಸಾಮಗ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊತ್ತೊಯ್ಯಲಿದೆ. 

ಇನ್ನು ಕಲ್ಪನಾ ಚಾವ್ಲಾ, ನಾಸಾ ಉಡಾವಣೆ ಮಾಡಿದ್ದ ಕೊಲಂಬಿಯಾ ಗಗನನೌಕೆಯ ತಜ್ಞರ ತಂಡದ ಸದಸ್ಯೆಯಾಗಿದ್ದರು. 2003ರಲ್ಲಿ ಈ ಗಗನನೌಕೆ ಭೂಮಿಗೆ ಮರಳುವಾಗ ಅಪಘಾತಕ್ಕೀಡಾಗಿತ್ತು. ಈ ಘೋರ ದುರಂತದಲ್ಲಿ ಚಾವ್ಲಾ ಸೇರಿದಂತೆ ಇತರೆ ಏಳು ಗಗನಯಾತ್ರಿಗಳು ಸಾವನ್ನಪ್ಪಿದರು. 

SCROLL FOR NEXT